ಶಿವಮೊಗ್ಗ: ಸುಮಾರು 2.25 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನಗರದಲ್ಲಿಂದು ಚಾಲನೆ ನೀಡಿದರು.
ಅಭಿವೃದ್ಧಿ ಕಾಮಗಾರಿಗಳ ಮೊದಲ ಯೋಜನೆಯಾದ ನಗರದ ಗೌಡ ಸಾರಸ್ವತ ಕಲ್ಯಾಣ ಮಂದಿರ ಬಳಿಯ ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಪಾಲಿಕೆ ಉಪ ಮೇಯರ್ ಚೆನ್ನ ಬಸಪ್ಪ, ಸದಸ್ಯೆ ಸುನೀತಾ ಅಣ್ಣಪ್ಪ, ಶ್ರೀನಿವಾಸ್, ಹೆಚ್.ಎನ್.ಮಂಜುನಾಥ್, ನಗರಾಧ್ಯಕ್ಷ ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.