ETV Bharat / state

ಮೇ 31ರಿಂದ ಜೂನ್ 7ರ ತನಕ ಶಿವಮೊಗ್ಗ ಜಿಲ್ಲೆ ಸಂಪೂರ್ಣ ಲಾಕ್​ಡೌನ್ - Shimoga complete lockdown

ಕೊರೊನಾ ಜಿಲ್ಲೆಯಲ್ಲಿ ಹತೋಟಿಗೆ ಬರ್ತಾ ಇದ್ರು‌ ಸಹ ಜನ ಓಡಾಟ ಜಾಸ್ತಿಯಾಗಿದೆ. ಇದರಿಂದ ಸಂಪೂರ್ಣ ಲಾಕ್​ಡೌನ್ ಮಾಡಲಾಗುತ್ತಿದೆ. ಮೆಡಿಕಲ್,‌ ಆಸ್ಪತ್ರೆ, ಪಾರ್ಸಲ್ ಸೇರಿದಂತೆ ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿ, ಬ್ಯಾಂಕ್ ಸೇರಿದಂತೆ ಎಲ್ಲವು ಬಂದ್ ಆಗಲಿವೆ ಎಂದು ತಿಳಿಸಿದರು.

ಸಚಿವ ಈಶ್ವರಪ್ಪ
ಸಚಿವ ಈಶ್ವರಪ್ಪ
author img

By

Published : May 29, 2021, 7:43 PM IST

ಶಿವಮೊಗ್ಗ: ಜಿಲ್ಲೆಯಲ್ಲಿ‌ ಕೊರೊನಾ‌ ಸೋಂಕು ಹತೋಟಿಗೆ ತರುವ ಅವಶ್ಯಕತೆ ಇರುವುದರಿಂದ ಮೇ 31 ರಿಂದ ಜೂನ್ 7ರ ತನಕ ಜಿಲ್ಲೆಯನ್ನು ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ‌ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕೊರೊನಾ ಜಿಲ್ಲೆಯಲ್ಲಿ ಹತೋಟಿಗೆ ಬರ್ತಾ ಇದ್ರು‌ ಸಹ ಜನರ ಓಡಾಟ ಜಾಸ್ತಿಯಾಗಿದೆ. ಇದರಿಂದ ಸಂಪೂರ್ಣ ಲಾಕ್​ಡೌನ್ ಮಾಡಲಾಗುತ್ತಿದೆ. ಮೆಡಿಕಲ್,‌ ಆಸ್ಪತ್ರೆ, ಪಾರ್ಸಲ್ ಸೇರಿದಂತೆ ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿ, ಬ್ಯಾಂಕ್ ಸೇರಿದಂತೆ ಎಲ್ಲವು ಬಂದ್ ಆಗಲಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 332 ಗ್ರಾಮಗಳು ಕೋವಿಡ್ ಮುಕ್ತ:
ಜಿಲ್ಲೆಯಲ್ಲಿ 332 ಗ್ರಾಮಗಳಲ್ಲಿ‌ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಇಷ್ಟೊಂದು ಗ್ರಾಮಗಳು ಕೋವಿಡ್ ಮುಕ್ತವಾಗಲು ಟಾಸ್ಕ್ ಪೋರ್ಸ್​ನ ಕಾರ್ಯದಿಂದ ಸಾಧ್ಯವಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ

ಜಿಲ್ಲೆಯಲ್ಲಿ 35 ಬ್ಲಾಕ್ ಫಂಗಸ್ ಪತ್ತೆ:
ಜಿಲ್ಲೆಯಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 13 ಪ್ರಕರಣ ಧೃಢವಾಗಿದೆ. ಒಂದು ಸಾವು ಸಂಭವಿಸಿದೆ. ನಾಲ್ಕು ಜನ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ. ಇನ್ನೂ 26 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ನರೇಗಾ ಕಾಮಗಾರಿ‌‌ ನಿಲ್ಲುವುದಿಲ್ಲ. ಈ ಕಾಮಗಾರಿಯು ಕೋವಿಡ್ ನಿಯಮಾವಳಿಯ ಪ್ರಕಾರ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಎಸ್​ಪಿ ಲಕ್ಷ್ಮೀಪ್ರಸಾದ್ ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.