ಶಿವಮೊಗ್ಗ: ಗಾಂಧಿ ಪಾರ್ಕ್ ಅನ್ನು ವೈಜ್ಞಾನಿಕವಾಗಿ ಸಮರ್ಪಕವಾಗಿ ಅಭಿವೃದ್ಧಿಗೊಳಿಸಲು ಸಿಡಬ್ಲುಇ ಇನ್ಸ್ಟಿಟ್ಯೂಟ್ಗೆ ಟೆಂಡರ್ ನೀಡಲಾಗಿದೆ. ಗಾಂಧಿಪಾರ್ಕ್ನಲ್ಲಿ ಶಿವಮೊಗ್ಗದ ಇತಿಹಾಸ ತಿಳಿಸಿಕೊಡುವ ಮಾಹಿತಿ ಕೇಂದ್ರ ಹಾಗೂ ಸೈನ್ಸ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ.
ಶಿವಮೊಗ್ಗದ ಇತಿಹಾಸವನ್ನು ಸಾರುವ ತುಂಗಾನದಿ, ಪಶ್ಚಿಮಘಟ್ಟಗಳು, ಜೋಗ, ಶಿಸ್ತಿನ ಸಿಪಾಯಿ ಎಂದೇ ಹೆಸರುವಾಸಿಯಾಗಿರುವ ಕೆಳದಿ ಅರಸ ಶಿವಪ್ಪನಾಯಕನ ಅರಮನೆ ಹಾಗೂ ಆತನ ಆಡಳಿತದ ಬಗ್ಗೆ ತಿಳಿಸಿಕೊಡುವುದು ಸೇರಿದಂತೆ ಜಿಲ್ಲೆಯ ಸಮಗ್ರ ವಿವರ ನೀಡುವ ಮಾಹಿತಿ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ.
ಇದನ್ನೂ ಓದಿ: ಶಿವಮೊಗ್ಗ : ಗಲಾಟೆ, ಗದ್ದಲದ ನಡುವೆ ಮಹಾನಗರ ಪಾಲಿಕೆ ಬಜೆಟ್ ಮಂಡನೆ
ಶಿವಮೊಗ್ಗದ ಗಾಂಧಿಪಾರ್ಕ್ನ 2 ಎಕರೆ ಜಾಗದಲ್ಲಿ ಮಾಹಿತಿ ಕೇಂದ್ರ ಹಾಗೂ ಸೈನ್ಸ್ ಪಾರ್ಕ್ ನಿರ್ಮಿಸಲು ಪ್ಲಾನ್ ರೂಪಿಸಲಾಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿ ಸೈನ್ಸ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇಂದಿನ ವಾತಾವರಣ ಬದಲಾವಣೆ ಜೊತೆಗೆ ಗ್ಯಾಲಕ್ಸಿ, ನಕ್ಷತ್ರ ಮಂಡಲ, ಸೋಲಾರ್ ಸಿಸ್ಟಮ್ ವ್ಯವಸ್ಥೆ ಸೇರಿದಂತೆ ವೈಜ್ಞಾನಿಕ ಜಗತ್ತಿನ ಸಮಗ್ರ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಲಾಗಿದೆ.