ಶಿವಮೊಗ್ಗ: ಜಿಲ್ಲೆಯ ಪ್ರಗತಿಗೋಸ್ಕರ ಅಂದುಕೊಂಡಂತೆ ಇನ್ನೂ ಮಾಡಲಾಗದ ಕೆಲಸಗಳನ್ನು ನೆನೆದು ನಿರ್ಗಮಿತ ಜಿಲ್ಲಾಧಿಕಾರಿ ಕೆ. ಎ. ದಯಾನಂದ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರಿಗೆ ಪ್ರೆಸ್ ಟ್ರಸ್ಟ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಅವರು, ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಇನ್ನೂ ಮಾಡಬೇಕಾದ ಕೆಲಸ ಬಹಳಷ್ಟಿತ್ತು. ಜನರ ಜೊತೆ ಬೇರೆಯುವುದರಲ್ಲಿ ಸುಖ ಮತ್ತು ತೃಪ್ತಿ ಇರುತ್ತದೆ. ಹೊಗಳಿಕೆಗಳೇ ಕಿರೀಟವಲ್ಲ, ಅದು ನಮ್ಮ ಕೆಲಸಗಳಿಗೆ ಪ್ರೇರಣೆ ಅಷ್ಟೇ ಎಂದರು.
ಹೀಗೆ ಮಾತನಾಡುತ್ತಾ ಅವರು ತಾವು ಮಾಡಬೇಕಾಗಿದ್ದ ಮೂರು ಕೆಲಸಗಳನ್ನು ನೆನೆದು ಭಾವುಕರಾದರು. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಗಾಂಜಾಕ್ಕೆ ಬಲಿಯಾಗುತ್ತಿರುವ ಸುದ್ದಿ ನನ್ನನ್ನು ಬೆಚ್ಚಿ ಬೀಳಿಸಿತ್ತು. ಹಾಗಾಗಿ ಜಿಲ್ಲೆಯನ್ನು ಗಾಂಜಾ ಮುಕ್ತ ಮಾಡಬೇಕೆಂಬ ಸಂಕಲ್ಪ ಹೊಂದಿದ್ದೆ.ಅದಕ್ಕಾಗಿ ಅಧಿಕಾರಿಗಳ, ವೈದ್ಯರ, ಮಾನಸಿಕ ತಜ್ಞರ ಜೊತೆ ಸಭೆ ನಡೆಸಿದ್ದೆ ಎಂದರು.
ಶರಾವತಿ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂಬ ಬಹು ದೊಡ್ಡ ಕನಸು ನನ್ನದಾಗಿತ್ತು. ಇದಕ್ಕಾಗಿ ಅರಣ್ಯ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬ ಬೇಸರ ನೋವು ನನಗಿದೆ ಎಂದರು.