ETV Bharat / state

ರಾಜ್ಯ ಹೆಲ್ತ್​ ಬುಲೆಟಿನ್​​ನಲ್ಲಿ ಒಂದು, ಜಿಲ್ಲಾ ವರದಿಯಲ್ಲಿ ಮತ್ತೊಂದು: ಶಿವಮೊಗ್ಗದಲ್ಲಿ ಪತ್ತೆಯಾದ ಕೇಸ್​ಗಳ ಬಗ್ಗೆ ಗೊಂದಲ!

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಹತ್ತು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 32 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 530 ಆಗಿದೆ.

Shimoga Covid Upadate
ಶಿವಮೊಗ್ಗ ಜಿಲ್ಲಾ ಕೋವಿಡ್​ ಸ್ಥಿತಿಗತಿಯ ಸಂಪೂರ್ಣ ಮಾಹಿತಿ
author img

By

Published : Jul 15, 2020, 11:42 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ 10 ಹೊಸ ಕೊರೊನಾ‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 530ಕ್ಕೆ ಏರಿಕೆಯಾಗಿದೆ.

ಮಂಗಳವಾರ 32 ಜನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದುವರೆಗೆ ಒಟ್ಟು 229 ಜನ ಗುಣಮುಖರಾಗಿದ್ದಾರೆ. ಸದ್ಯ 291 ಜನ ಚಿಕಿತ್ಸೆ ಪಡೆಯುತಿದ್ದು, ಈವರೆಗೆ 10 ಸಾವು ಸಂಭವಿಸಿದೆ ಎಂದು ರಾಜ್ಯ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವ್ಯಾಬ್​​ ಮಾದರಿ ಸಂಗ್ರಹಿಸಲಾಗುತ್ತಿದೆ. ಮಂಗಳವಾರ ಜಿಲ್ಲೆಯಾದ್ಯಂತ 543 ಜನರ ಸ್ವ್ಯಾಬ್​ ಮಾದರಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 21, 841 ಜನರ ಸ್ವ್ಯಾಬ್​ ಸಂಗ್ರಹಿಸಲಾಗಿದೆ. ಈ ಪೈಕಿ 20,261 ಜನರ ಫಲಿತಾಂಶ ಬಂದಿದೆ. ಮಂಗಳವಾರ ಪತ್ತೆಯಾದ 10 ಹೊಸ ಪ್ರಕರಣಗಳಲ್ಲಿ ಐಎಲ್​ಐನಿಂದ ಇಬ್ಬರಿಗೆ, ದ್ವಿತೀಯ‌ ಸಂಪರ್ಕದಿಂದ ಮೂವರಿಗೆ, ಅಂತರ್​ ಜಿಲ್ಲಾ ಪ್ರಯಾಣದಿಂದ ಮೂವರಿಗೆ ಹಾಗೂ ಸಂಪರ್ಕವೇ ಇಲ್ಲದೆ ಇಬ್ಬರಿಗೆ ಸೋಂಕು ತಗುಲಿದೆ.

ಶಿವಮೊಗ್ಗ ಜಿಲ್ಲಾ ಕೋವಿಡ್​ ಸ್ಥಿತಿಗತಿಯ ಸಂಪೂರ್ಣ ಮಾಹಿತಿ

ಜಿಲ್ಲಾ ಹೆಲ್ತ್ ಬುಲೆಟಿನ್​ನಲ್ಲಿ ಮಂಗಳವಾರ 30 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದ್ದು, ಸೋಂಕಿತರ ಸಂಖ್ಯೆ 598 ಎಂದು ನಮೂದಾಗಿದೆ. ಒಂದು ಸಾವು ಸಂಭವಿಸಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11 ಎಂದು ತೋರಿಸಿದೆ. ಅಲ್ಲದೆ ಆಸ್ಪತ್ರೆಯಿಂದ 12 ಜನ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 239 ಜನ ಬಿಡುಗಡೆಯಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 122 ಜನ, ಕೋವಿಡ್ ಕೇರ್ ಸೆಂಟರ್​ನಲ್ಲಿ 214 ಜನ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 12 ಜನ ಸೇರಿ ಒಟ್ಟು 348 ಜನ ಇದ್ದಾರೆ. ಒಟ್ಟು 142 ಕಂಟೈನ್​ಮೆಂಟ್​ ಝೋನ್​ಗಳಿಗೆ. ಹೊಸ ಪ್ರಕರಣಗಳ ಪೈಕಿ ಶಿವಮೊಗ್ಗದಲ್ಲಿ 23, ಶಿಕಾರಿಪುರದಲ್ಲಿ 03, ಸಾಗರದಲ್ಲಿ 01, ತೀರ್ಥಹಳ್ಳಿಯಲ್ಲಿ 03 ಪತ್ತೆಯಾಗಿದೆ ಎಂದು ಹೇಳಲಾಗಿದೆ. ರಾಜ್ಯ ಹೆಲ್ತ್​ ಬುಲೆಟಿನ್​ನಲ್ಲಿ ಒಂದು ರೀತಿ ಹಾಗೂ ಜಿಲ್ಲಾ ಬುಲೆಟಿನ್​ನಲ್ಲಿ ಒಂದು ರೀತಿ ಮಾಹಿತಿ ನೀಡಲಾಗಿದೆ. ಇದರಿಂದ ಯಾವುದನ್ನು ನಂಬಬೇಕು ಎಂಬುದರ ಬಗ್ಗೆ ಗೊಂದಲ ಉಂಟಾಗಿದೆ.

ಇಂದು ಜಿಲ್ಲಾಡಳಿತದ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಂಸದರು, ‌ಶಾಸಕರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಜೊತೆ ಲಾಕ್​​ಡೌನ್ ಜಾರಿ ಕುರಿತು ಸಭೆ ನಡೆಸಲಿದ್ದಾರೆ. ಈಗಾಗಲೇ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧ್ಯಾಹ್ನ‌ 3 ಗಂಟೆಯ ನಂತರ ಲಾಕ್​​ಡೌನ್ ಜಾರಿಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.