ಶಿವಮೊಗ್ಗ: ರಾಜ್ಯ ಅಪೆಕ್ಸ್ ಬ್ಯಾಂಕ್ ನ ಶಿವಮೊಗ್ಗ ಭಾಗದ ನಿರ್ದೇಶಕರಾಗಿ ತೀರ್ಥಹಳ್ಳಿಯ ಸಹಕಾರಿ ಧೋರಿಣ ಬಸವಾನಿ ವಿಜಯದೇವರನ್ನು ಆಯ್ಕೆ ಮಾಡಲಾಗಿದೆ.
ಇಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಸಭೆಯಲ್ಲಿ ಅಪೆಕ್ಸ್ ಬ್ಯಾಂಕ್ ಗೆ ಮುಂದಿನ ಐದು ವರ್ಷಗಳ ಅವಧಿಗೆ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಬಸವಾನಿ ವಿಜಯದೇವರನ್ನು ಆಯ್ಕೆ ಮಾಡಿದೆ.
ಇವರು ತೀರ್ಥಹಳ್ಳಿಯಲ್ಲಿ ಸಹ್ಯಾದ್ರಿ ಸಹಕಾರ ಸಂಘದ ಮೂಲಕ ಹಲವು ಸಹಕಾರಿ ಕೆಲಸಗಳನ್ನು ಮಾಡಿದ್ದಾರೆ. ಸಹ್ಯಾದ್ರಿ ಸಹಕಾರ ಸಂಘದ ಮೂಲಕ ಸಹ್ಯಾದ್ರಿ ಸಾರಿಗೆ, ಸಹ್ಯಾದ್ರಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದಾರೆ. ಇವರಿಗೆ ಜಿಲ್ಲಾ ಸಹಕಾರಿ ರಂಗ ಅಭಿನಂದನೆ ಸಲ್ಲಿಸಿದೆ.