ಶಿವಮೊಗ್ಗ: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10ನೇ ವಾರ್ಡಿನ ಚರ್ಚ್ ಮೌಂಟ್ ಭಾಗದ ಜನರಿಗೆ ರಸ್ತೆ ಸೌಕರ್ಯವೇ ಇಲ್ಲ. ಇಲ್ಲಿನ ಜನರು ಯಾರಿಗಾದ್ರೂ ಹುಷಾರಿಲ್ಲ ಎಂದರೇ, ಡೋಲಿ ಮೂಲಕವೇ ಹೊತ್ತುಕೊಂಡು ಹೋಗಬೇಕಾಗಿದೆ. ಈ ಕಾರಣಕ್ಕಾಗಿ ಅದ್ಯಮ್ ಎಂಬುವವರು ತಮ್ಮ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲು ಡೋಲಿ ಮಾಡಿಕೊಂಡು ಒಂದು ಕಿ.ಮೀ. ದೂರವಿರುವ ಮುಖ್ಯ ರಸ್ತೆಗೆ ಹೊತ್ತು ಬಂದಿದ್ದಾರೆ. ಅದ್ಯಮ್ ಮನೆ ತನಕ ಯಾವುದೇ ವಾಹನ ಹೋಗುವುದಿಲ್ಲ.
ಇದರಿಂದ ಅವರು ಡೋಲಿಯಲ್ಲಿ ತಮ್ಮ ತಾಯಿಯನ್ನು ಕೂರಿಸಿಕೊಂಡು, ಮತ್ತಿಬ್ಬರು ಸ್ನೇಹಿತರ ಸಹಾಯದಿಂದ ಮನೆಯಿಂದ ರಸ್ತೆಯ ತನಕ ಹೊತ್ತುಕೊಂಡು ಬಂದಿದ್ದಾರೆ. ನಂತರ ವಾಹನದಲ್ಲಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ.
ಈ ಭಾಗದಲ್ಲಿ ಹೆಚ್ಚಾಗಿ ವಯೋವೃದ್ಧರಿದ್ದು, ಅವರು ಸಾಗಲು ದಾರಿಯೇ ಇಲ್ಲ. ರಸ್ತೆ ನಿರ್ಮಿಸಿ ಎಂದು ಈ ಭಾಗದ ಜನತೆ ಪಟ್ಟಣ ಪಂಚಾಯಿತಿ ಅವರಿಗೆ ಮನವಿ ಸಲ್ಲಿಸಿದ್ರು ಸಹ ಅದು ಪ್ರಯೋಜನಕ್ಕೆ ಬಂದಿಲ್ಲ. ಇತ್ತ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ, ಅತ್ತ ಅಧಿಕಾರಿಗಳು ಬಂದಿಲ್ಲ. ಆದ್ರೆ ತುರ್ತು ಪರಿಸ್ಥಿತಿಯಲ್ಲಿ ತೆರಳಲು ಇಲ್ಲಿನ ಜನತೆ ಮಾತ್ರ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಮೀರ್ ಅಹ್ಮದ್ ಖಾನ್ ಭೇಟಿ: ವಿಶೇಷ ಪೂಜೆ ಸಲ್ಲಿಕೆ