ETV Bharat / state

ಅಧಿಕಾರಕ್ಕೇರುವ ಕಾಂಗ್ರೆಸ್‌ ಆಸೆ ಭಗ್ನ.. ಬಿಜೆಪಿ ತೆಕ್ಕೆಗೆ ಶಿಕಾರಿಪುರ ಪುರಸಭೆ? - Shikaripura municipal authority for BJP

ಬಿಜೆಪಿ ಸ್ಥಳೀಯ ಆಡಳಿತ ಪಡೆಯುವುದಕ್ಕಾಗಿ ಆಪರೇಷನ್ ಕಮಲದ ಮೂಲಕ ಕೊರೊನಾ ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜೊತೆಗೆ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದಿಂದ ಕಾಂಗ್ರೆಸ್ ಸದಸ್ಯರ ಕೆಲಸಕ್ಕೆ ಅಡ್ಡಿಪಡಿಸಿ ರಾಜೀನಾಮೆ ನೀಡಿಸಿದ್ದಾರೆ..

Shikaripura municipal authority for BJP
ಬಿಜೆಪಿ ತೆಕ್ಕೆಗೆ ಶಿಕಾರಿಪುರ ಪುರಸಭೆ ಅಧಿಕಾರ..?
author img

By

Published : Jul 24, 2020, 7:15 PM IST

ಶಿವಮೊಗ್ಗ : ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಶಿಕಾರಿಪುರ ಪುರಸಭೆ ಚುನಾವಣೆ ಮುಗಿದು ವರ್ಷ ಕಳೆದಿದ್ರೂ ಈವರೆಗೆ ಪುರಸಭೆ ಅಧ್ಯಕ್ಷ ಮೀಸಲು ಅಂತಿಮಗೊಂಡಿಲ್ಲ. ಆದರೂ ಯಾವ ಪಕ್ಷ ಅಧಿಕಾರಕ್ಕೇರುತ್ತದೆ ಎಂಬ ಕುರಿತು ವರ್ಷದಿಂದ ನಡೆಯುತ್ತಿರುವ ರಾಜಕೀಯ ಚರ್ಚೆ ಹೊಸದೊಂದು ತಿರುವು ಪಡೆದಿದೆ.

ಕೊರೊನಾ ನಡುವೆಯೂ ಬಿಜೆಪಿ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು, ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಆಪರೇಷನ್ ಕಮಲ ಮಾಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪುರಸಭೆಯಲ್ಲಿ ಬಿಜೆಪಿ ಆಡಳಿತ ಹಿಡಿಯುವುದು ಪಕ್ಕಾ ಆಗಿದೆ. ಶಿಕಾರಿಪುರದ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು, ಕಾಂಗ್ರೆಸ್ ಪುರಸಭೆ ಸದಸ್ಯರನ್ನು ಆಪರೇಷನ್ ಕಮಲದ ಮೂಲಕ ತನ್ನತ್ತ ಸೆಳೆದುಕೊಂಡು ಅಧಿಕಾರ ಹಿಡಿಯುವತ್ತ ದಾಪುಗಾಲು ಇಟ್ಟಿದೆ.

ಇಬ್ಬರು ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ, ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಪಕ್ಷೇತರವಾಗಿ ಗೆಲುವು ಸಾಧಿಸಿದ್ದ ಮೂವರು ಸದಸ್ಯರೂ ಸಹ ಕಮಲ ಮುಡಿದಿದ್ದು, ತಮ್ಮ ನಿಷ್ಠೆ ಬಿಎಸ್​ವೈ ಕಡೆಗೆ ಎನ್ನುವ ಮೂಲಕ ಪುರಸಭೆ ರಾಜಕೀಯದ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ.

ಬಿಜೆಪಿ ತೆಕ್ಕೆಗೆ ಶಿಕಾರಿಪುರ ಪುರಸಭೆ ಅಧಿಕಾರ?

ಚುನಾವಣೆ ನಂತರ ಸಹಜವಾಗಿ ಬಹುಮತ ಪಡೆದಿದ್ದ ಕಾಂಗ್ರೆಸ್​ನ ಬಲ ಕುಸಿತಗೊಂಡಿದೆ. ಬಿಜೆಪಿ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡಿದೆ. ಪುರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಸದಸ್ಯರಲ್ಲಿನ ಪೈಪೋಟಿ ಮತ್ತು ಸಿಎಂ ಕ್ಷೇತ್ರದಲ್ಲಿ ಆಡಳಿತ ಹಿಡಿಯಲೇಬೇಕೆಂದು ಬಿಜೆಪಿ ಜಿದ್ದಿಗೆ ಬಿದ್ದಿದ್ದು, ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದೆ.

ಶಿಕಾರಿಪುರ ಪುರಸಭೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಏರುವ ಮುನ್ನವೇ ಕಾಂಗ್ರೆಸ್​ನ ಇಬ್ಬರು ಸದಸ್ಯರಾದ ರಮೇಶ್, ಉಮಾವತಿ ಪುರಸಭೆ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಾಲೂಕಿನ ರಾಜಕೀಯ ಬೆಳವಣಿಗೆಯಲ್ಲಿ ವಿಭಿನ್ನ ದಾಖಲೆಗೆ ಕಾರಣರಾಗಿದ್ದಾರೆ. 25 ವರ್ಷಗಳ ನಂತರ ಮೊದಲ ಬಾರಿಗೆ ಪುರಸಭೆಯಲ್ಲಿ ಅಧಿಕಾರಕ್ಕೇರುವ ಉತ್ಸಾಹ ಹೊಂದಿದ್ದ ಕಾಂಗ್ರೆಸ್​​ನ ಆಸೆ ಭಗ್ನವಾಗಿದೆ.

ಬಿಜೆಪಿ ಸ್ಥಳೀಯ ಆಡಳಿತ ಪಡೆಯುವುದಕ್ಕಾಗಿ ಆಪರೇಷನ್ ಕಮಲದ ಮೂಲಕ ಕೊರೊನಾ ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಜೊತೆಗೆ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದಿಂದ ಕಾಂಗ್ರೆಸ್ ಸದಸ್ಯರ ಕೆಲಸಕ್ಕೆ ಅಡ್ಡಿಪಡಿಸಿ ರಾಜೀನಾಮೆ ನೀಡಿಸಿದ್ದಾರೆ. ಆಪರೇಷನ್ ಕಮಲ ನಿರ್ಧಾರ ಕೈಬಿಡದೇ ಹೋದರೆ ಮುಂದಿನ ದಿನಗಳಲ್ಲಿ ಶಿಕಾರಿಪುರ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಶಿಕಾರಿಪುರ ಪುರಸಭೆಯ ಒಟ್ಟು 23 ಸ್ಥಾನದಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಪಕ್ಷೇತರರು 3 ಸ್ಥಾನ ಗೆದ್ದಿದ್ದರು. ಹೀಗಾಗಿ ಕಾಂಗ್ರೆಸ್ ಸಹಜ ಬಹುಮತ ಪಡೆದಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿಯ ಶಾಸಕ, ಸಂಸದರಿಗೂ ಮತದಾನ ಅವಕಾಶ ಇದ್ದರೂ ಬಹುಮತ ಸಿಗುತ್ತಿರಲಿಲ್ಲ. ಹೀಗಾಗಿ ಪಕ್ಷೇತರ ಸದಸ್ಯರು ಯಾವ ಪಕ್ಷ ಬೆಂಬಲಿಸುತ್ತಾರೋ ಆ ಪಕ್ಷ ಪುರಸಭೆ ಅಧಿಕಾರ ನಡೆಸುತ್ತದೆ ಎನ್ನುವ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇದೀಗ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಅಧಿಕಾರದತ್ತ ದಾಪುಗಾಲಿಟ್ಟಿದ್ದು, ಬಿಜೆಪಿ ಸದಸ್ಯರು ಖುಷ್​ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.