ETV Bharat / state

ನೆಟ್​​​ವರ್ಕ್​​​ಗಾಗಿ ಆಗ್ರಹಿಸಿ ಪಾದಯಾತ್ರೆ ನಡೆಸಿದ ಶರಾವತಿ ಮುಳುಗಡೆ ಸಂತ್ರಸ್ತರು - ನೆಟ್​​​ವರ್ಕ್​​​ಗಾಗಿ ಆಗ್ರಹಿಸಿ ಶರಾವತಿ ಸಂತ್ರಸ್ತರ ಪಾದಯಾತ್ರೆ

ನೆಟ್​​​ವರ್ಕ್ ಇಲ್ಲದೆ ಆನ್​​ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ಮಾಡುವುದು ಕಷ್ಟಕರವಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಾಗಿ 108ಕ್ಕೆ ಕರೆ ಮಾಡುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು..

Sharavathi victims are protest
ಪಾದಯಾತ್ರೆ ನಡೆಸಿದ ಶರಾವತಿ ಮುಳುಗಡೆ ಸಂತ್ರಸ್ತರು
author img

By

Published : Oct 2, 2021, 9:13 PM IST

ಶಿವಮೊಗ್ಗ : ನೋ ನೆಟ್​ವರ್ಕ್​​, ನೋ ವೋಟಿಂಗ್​​ ಎಂಬ ಅಭಿಯಾನದ ಭಾಗವಾಗಿ ಇಂದು ಶರಾವತಿ ಮುಳುಗಡೆಯ ಸಂತ್ರಸ್ತರು ಕಟ್ಟಿನಕಾರು ಗ್ರಾಮದಿಂದ ಕೋಗಾರು ಗ್ರಾಮದವರೆಗೂ ಪಾದಯಾತ್ರೆ ನಡೆಸಿ ಮೊಬೈಲ್ ನೆಟ್​​ವರ್ಕ್​​ಗಾಗಿ ಆಗ್ರಹಿಸಿದರು.

ಕಟ್ಟಿನಕಾರು ಸೇರಿ ಸುತ್ತಮುತ್ತಲ ಗ್ರಾಮಗಳ ಸುಮಾರು‌ 15 ಕಿ.ಮೀ ದೂರದಲ್ಲಿ ಯಾವುದೇ ಮೊಬೈಲ್​ ಕಂಪನಿಯ ನೆಟ್​​​ವರ್ಕ್ ಲಭ್ಯವಾಗುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದಂತಾಗಿದೆ. ಇದರಿಂದ ತಮಗೆ ಮೊಬೈಲ್ ನೆಟ್​​​​ವರ್ಕ್ ಸೌಲಭ್ಯ ವದಗಿಸಬೇಕೆಂದು ಆಗ್ರಹಿಸಿದರು.

ನೋ‌ ನೆಟ್ ವರ್ಕ್, ನೋ ವೋಟಿಂಗ್ ಅಭಿಯಾನ : ಚನ್ನಗೊಂಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಟ್ಟಿನಕಾರು, ಕಾರಣಿ, ಹಾಳಸಸಿ ಭಾಗದ ಜನರು ಕಳೆದ ಆರು ತಿಂಗಳಿಂದ ಜನತೆ ಅಭಿಯಾನ ಆರಂಭಿಸಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ಪಾದಯಾತ್ರೆ, ರಸ್ತೆ ತಡೆ ನಡೆಸಿ ಕಟ್ಟಿನಕಾರು ಗ್ರಾಮದಿಂದ ಚನ್ನಗೊಂಡ ಗ್ರಾಮ ಪಂಚಾಯತ್‌ವರೆಗೆ ಪಾದಯಾತ್ರೆ ನಡೆಸಿದರು.

ಸಮಸ್ಯೆಯ ಸುಳಿಯಲ್ಲಿ ಜನತೆ : ನೆಟ್​​​ವರ್ಕ್ ಇಲ್ಲದೆ ಆನ್​​ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ಮಾಡುವುದು ಕಷ್ಟಕರವಾಗಿದೆ. ಅಲ್ಲದೆ ವೈದ್ಯಕೀಯ ಸೇವೆಗಾಗಿ 108ಕ್ಕೆ ಕರೆ ಮಾಡುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಪಾದಯಾತ್ರೆಯಲ್ಲಿ 6 ವರ್ಷದ ಬಾಲಕನಿಂದ 70 ವರ್ಷದ ವಯೋವೃದ್ದರು ಸಹ ಭಾಗಿಯಾಗಿದ್ದರು. ಚನ್ನಗೊಂಡ ಗ್ರಾಮ ಪಂಚಾಯಿತಿ ಮುಂಭಾಗ ಭಟ್ಕಳ ರಸ್ತೆಯಲ್ಲಿ ಸಾಂಕೇತಿಕ‌ ಧರಣಿ ಮಾಡಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ದಸರಾ ನಂತರ 1 ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ : ಶಿಕ್ಷಣ ಸಚಿವ ಬಿ ಸಿ ನಾಗೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.