ಶಿವಮೊಗ್ಗ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪದ್ಮಶ್ರೀ ಡಾ. ವಿ.ಪ್ರಕಾಶ್ , ದೇಶದಲ್ಲಿ ಆಹಾರ ಬೆಳೆಯುತ್ತಿರುವ ರೈತ ಒಂದೂ ದಿನನೂ ಸಹ ರಜೆ ತೆಗೆದು ಕೊಳ್ಳುವುದಿಲ್ಲ. ಆತನಿಗೆ ಯಾವ ಭಾನುವಾರನೂ ಇಲ್ಲ. ಯಾವ ರಜೆನೂ ಇಲ್ಲ. ನಾವು ತಿನ್ನುವ ಆಹಾರವನ್ನು ಬಿಸಾಡುವ ಬದಲು ನಮಗೆ ಎಷ್ಟು ಬೇಕೂ ಅಷ್ಟು ಬಡಿಸಿಕೊಂಡರೆ ಅದೇ ನಾವು ರೈತರಿಗೆ ಕೊಡುವ ಗೌರವ ಎಂದರು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ನಿಂದ ಶಿವಮೊಗ್ಗದ ವಿವಿ ಮತ್ತು ಎಲ್ಲಾ ಸಾಂಸ್ಥಿಕ ಮಹಾವಿದ್ಯಾನಿಲಯಗಳು ಮಾನ್ಯತೆ ಪಡೆದುಕೊಂಡಿವೆ. ರಾಷ್ಟ್ರ ಮಟ್ಟದ ಐದು ಅತ್ತ್ಯುತ್ತಮ ಮಹಾ ವಿದ್ಯಾನಿಲಯಗಳಲ್ಲಿ ಶಿವಮೊಗ್ಗದ ಕೃಷಿ ವಿವಿ ಕೂಡ ಒಂದಾಗಿದೆ.