ETV Bharat / state

ಸಾಗರದಲ್ಲಿ ಸರಣಿ ಕಳ್ಳತನ.. ಒಂದು ಮನೆ ಸೇರಿದಂತೆ  ಮೂರು ದೇವಾಲಯಗಳಿಗೆ ಕನ್ನ

author img

By

Published : Jan 16, 2020, 6:06 PM IST

ಸಾಗರ ಪಟ್ಟಣದಲ್ಲಿ ಒಂದು ಮನೆ ಸೇರಿದಂತೆ  ಮೂರು ದೇವಾಲಯಗಳಲ್ಲಿ  ಸರಣಿ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ

Serial theft in  sagar city
ಸಾಗರದಲ್ಲಿ ಸರಣಿ ಕಳ್ಳತನ.. ಪೊಲೀಸರಿಂದ ಪರಿಶೀಲನೆ

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಒಂದು ಮನೆ ಸೇರಿದಂತೆ ಮೂರು ದೇವಾಲಯಗಳಲ್ಲಿ ಸರಣಿ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗಾಂಧಿ ನಗರದ ಮೂರು ದೇವಾಲಯಗಳ ಹುಂಡಿ ಒಡೆದು ಲಕ್ಷಾಂತರ ರೂ ಹಣವನ್ನು ದೋಚಲಾಗಿದೆ. ಹಾಗೆ ನವಾಯತ್ ಕಾಲೋನಿಯ ಮೀನು ವ್ಯಾಪಾರಿ ಅಬ್ದುಲ್ ಶುಕೂರ್​ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಚಿನ್ನಾಭರಣ ಸೇರಿದಂತೆ ನಗದು ದೋಚಿದ ಖದೀಮರು ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಾಗರ ಟೌನ್ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಸಾಗರದಲ್ಲಿ ದೇವಾಲಯ ಮನೆ ಸೇರಿ ಸರಣಿಗಳ್ಳತನ: ಪೊಲೀಸರಿಂದ ತನಿಖೆ.

ಶಿವಮೊಗ್ಗ: ಸಾಗರ ಪಟ್ಟಣದಲ್ಲಿ ಮೂರು ದೇವಾಲಯ ಹಾಗೂ ಒಂದು ಮನೆಯಲ್ಲಿ ಸರಣಿಗಳ್ಳತನ ನಡೆದಿದೆ. ಸಾಗರ ಪಟ್ಟಣದ ಗಾಂಧಿ ನಗರದ ಮೂರು ದೇವಾಲಯ ಹಾಗೂ ನವಾಯತ್ ಕಾಲೋನಿಯ ಮೀನು ವ್ಯಾಪಾರಿ ಅಬ್ದುಲ್ ಶುಕೂರ್ ರವರ ಮನೆಯಲ್ಲಿ ಕಳ್ಳತನ ನಡೆಸಲಾಗಿದೆ.Body:ದೇವಾಲಯಗಳ ಹುಂಡಿ ಒಡೆದು ಲಕ್ಷಾಂತರ ರೂ ಹಣವನ್ನು ದೋಚಲಾಗಿದೆ. ಇನ್ನೂ ಅಬ್ದುಲ್ ಶುಕೂರ್ ರವರ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಹಣ ಹಾಗೂ ಚಿನ್ನಾಭರಣವನ್ನು ದೋಚಲಾಗಿದೆ. ಅಬ್ದುಲ್ ಶುಕೂರ್ ರವರು ನಮಾಜ್ ಗೆ ಹೋದಾಗ ಕಳ್ಳ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ.Conclusion: ಇವರ ಮನೆಯಿಂದ ಬಂಗಾರದ ನೆಕ್ಲೇಸ್,ಉಂಗುರಗಳು ಹಾಗೂ ಹಣವನ್ನು ಕದ್ದು ಕಳ್ಳ ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಘಟನ ಸ್ಥಳಕ್ಕೆ ಸಾಗರ ಟೌನ್ ಪೊಲೀಸರು ಹಾಗೂ ಶ್ವಾನದಳ ಹಾಗೂ ಬೆರಳಚ್ಚು ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.