ಶಿವಮೊಗ್ಗ: ಮಹಿಳಾ ದಿನದ ಹಿನ್ನೆಲೆ 54ಕ್ಕೂ ಹೆಚ್ಚು ಗರ್ಭಿಣಿಯರಿಗೆ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೀಮಂತ ಹಾಗೂ ಮಡಿಲು ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಶ್ವತಿ ಮಹಿಳಾ ವೇದಿಕೆ ಸಂಸ್ಥೆ ಸದಸ್ಯರು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಚಾಲನೆ ನೀಡಿದರು. ಅತಿಥಿಗಳು ಸೇರಿದಂತೆ ನೆರೆದಿದ್ದ ಎಲ್ಲ ಮಹಿಳೆಯರು, ಗರ್ಭಿಣಿಯರಿಗೆ ಅವರು ಕುಳಿತ ಜಾಗದಲ್ಲಿಯೇ ಸೀಮಂತ ಕಾರ್ಯ ನೆರವೇರಿಸಿದರು. ಅರಿಶಿಣ, ಕುಂಕುಮ, ಸೀರೆ, ಹಸಿರು ಬಳೆ, ಹೂವು ಹಣ್ಣುಗಳಿಂದ ಉಡಿ ತುಂಬಿ ಶುಭ ಹಾರೈಸಿದರು.
ಈ ವೇಳೆ, ಸೀಮಂತ ಮಾಡಿಸಿಕೊಂಡ ಮಹಿಳೆಯರಲ್ಲಿ ಸಂತಸ ಮನೆಮಾಡಿತ್ತು. ಜಾತಿ, ಮತ, ಬೇಧ, ಭಾವಗಳಿಲ್ಲದೇ ಎಲ್ಲ ವರ್ಗದ ಗರ್ಭಿಣಿಯರಿಗೆ ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಹೀಗೆ, ಹೆಣ್ಣು ಮಕ್ಕಳ ಅಂತರಂಗದ ಮಾತುಗಳನ್ನು ಮಹಿಳಾ ಸಂಘಟನೆ ಸದಸ್ಯರೇ ಅರ್ಥೈಸಿ ಕೊಂಡು ಇಂತಹ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಬಡ ಮತ್ತು ಅಸಹಾಯಕ ಮಹಿಳೆಯರಿಗೆ ದಾರಿದೀಪವಾಗಬೇಕಿದೆ.
ಇದನ್ನೂ ಓದಿ: ನಿರ್ಬಂಧದ ವಿರುದ್ಧ ಪ್ರತಿತಂತ್ರ ಬಳಸಿದ ರಷ್ಯಾದಿಂದ ರಫ್ತು ಬ್ಯಾನ್!