ETV Bharat / state

ಶಿವಮೊಗ್ಗ: ರಸ್ತೆ ದುರಸ್ತಿ-ಸ್ವಚ್ಛತಾ ಕಾರ್ಯಕ್ಕೆ ಆಗ್ರಹಿಸಿ ಎಸ್​ಡಿಪಿಐ ಪ್ರತಿಭಟನೆ - SDPI protest for repair of Road

ಶಿವಮೊಗ್ಗ ಜಿಲ್ಲೆಯ ಶಾಂತಿನಗರದ ರಸ್ತೆ ದುರಸ್ತಿ ಹಾಗೂ ಸ್ವಚ್ಚತೆ ಕಾರ್ಯ ಮಾಡಬೇಕು ಎಂದು ಆಗ್ರಹಿಸಿ ಎಸ್​ಡಿಪಿಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗದಲ್ಲಿ  ಎಸ್​ಡಿಪಿಐ ಪ್ರತಿಭಟನೆ
ಶಿವಮೊಗ್ಗದಲ್ಲಿ ಎಸ್​ಡಿಪಿಐ ಪ್ರತಿಭಟನೆ
author img

By

Published : Oct 1, 2020, 1:29 PM IST

ಶಿವಮೊಗ್ಗ: ಶಾಂತಿನಗರದ ರಸ್ತೆ ದುರಸ್ತಿ ಹಾಗೂ ಸ್ವಚ್ಛತಾ ಕಾರ್ಯ ಮಾಡಬೇಕೆಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್​ಡಿಪಿಐ) ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶಾಂತಿನಗರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಚರಂಡಿ ಸ್ವಚ್ಛತೆಯೂ ಮರೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕುಟುಂಬಗಳು ಹಲವಾರು ರೋಗಗಳು ಹರಡುವ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ.

ರಸ್ತೆ ದುರಸ್ತಿ-ಸ್ವಚ್ಛತಾ ಕಾರ್ಯಕ್ಕೆ ಆಗ್ರಹಿಸಿ ಎಸ್​ಡಿಪಿಐ ಪ್ರತಿಭಟನೆ

ಶಾಂತಿನಗರದ ನಿವಾಸಿಗಳು ಅನೇಕ ಬಾರಿ ರಸ್ತೆ ಸರಿಪಡಿಸುವಂತೆ ಹಾಗೂ ಚರಂಡಿ ಸ್ವಚ್ಛತೆ ಕಾಪಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಮಹಾನಗರ ಪಾಲಿಕೆ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕು ಹಾಗೂ ಚರಂಡಿಗಳ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.