ಶಿವಮೊಗ್ಗ : ಸಂಸ್ಕೃತ ಭಾಷೆ ವ್ಯಕ್ತಿಗಳಿಗೆ ಸಂಸ್ಕಾರ ಕಲಿಸುತ್ತದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಪ್ರೌಢಶಾಲಾ ಸಂಸ್ಕೃತಾಧ್ಯಾಪಕರ ಸಂಘ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ವತಿಯಿಂದ ನಗರದ ಕಸ್ತೂರ್ಬಾ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ವ್ಯಕ್ತಿಗಳಿಗೆ ಸಂಸ್ಕಾರ ಕಳಿಸುವ ಮಾಧ್ಯಮ. ಸಂಸ್ಕೃತಕ್ಕೆ ಪ್ರಪಂಚದಲ್ಲಿ ಒಂದು ಉನ್ನತ ಸ್ಥಾನಮಾನ ಸಿಗುತ್ತದೆ. ಅಂತೆಯೇ ಇಡೀ ವಿಶ್ವವೇ ಯೋಗ ಮಾಡುವಂತಾಗಿದೆ. ಇದು ನಮ್ಮ ಭಾರತೀಯ ಸಂಸ್ಕೃತಿ ಎಂದು ಹೇಳಿದರು.
ಇನ್ನು ಯಾರೂ ಸಂಸ್ಕೃತ ಕಲಿಯುತ್ತಾರೋ ಅವರಲ್ಲಿ ದುಶ್ಚಟಗಳು ಇರಲು ಸಾಧ್ಯವಿಲ್ಲ. ಇವರು ಸಮಾಜದ ಮಾರ್ಗದರ್ಶಕರಾಗಿ ಇರುತ್ತಾರೆ ಎಂದು ಹೇಳಿದರು. ಇದೇ ವೇಳೆ ಸಂಸ್ಕೃತ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಓದಿ : ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಜು. 26 ರಂದು ಮೌನ ಸತ್ಯಾಗ್ರಹ : ಡಿಕೆಶಿ