ETV Bharat / state

ಶಿವಮೊಗ್ಗ: ಕುವೆಂಪು ಮಹಾವಿದ್ಯಾಲಯದ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಕ್ಯಾಂಪಸ್​​ನಲ್ಲಿ ಸಂಕ್ರಾಂತಿ ಸುಗ್ಗಿ ಹಬ್ಬದ ವಾತಾವರಣ ಮನೆಮಾಡಿತ್ತು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಇತರ ಸಿಬ್ಬಂದಿ ಎಲ್ಲರೂ ಸಂಕ್ರಾಂತಿ ಹಬ್ಬ ಆಚರಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು.

sankranti festival celebration at kuvempu university
ಕುವೆಂಪು ಮಹಾವಿದ್ಯಾಲಯದ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ
author img

By

Published : Jan 14, 2021, 8:29 AM IST

ಶಿವಮೊಗ್ಗ: ನವಧ್ಯಾನ್ಯಗಳಿಗೆ ಪೂಜೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು, ಸಂಕ್ರಾತಿ ಹಬ್ಬದ ಹಾಡಿಗೆ ನೃತ್ಯ ಮಾಡುತ್ತಿರುವ ಸ್ಟುಡೆಂಟ್ಸ್​, ಕಲರ್ ಫುಲ್ ರೇಷ್ಮೇ ಸೀರೆಗಳು, ಪಂಚೆ, ಶಲ್ಯ ಉಡುಗೆ ತೊಟ್ಟು ಕಂಗೂಳಿಸುತ್ತಿರುವ ವಿದ್ಯಾರ್ಥಿಗಳು, ಹೌದು ಈ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗ ನಗರದ ಕುವೆಂಪು ಮಹಾವಿದ್ಯಾಲಯದ ಅವರಣದಲ್ಲಿ. ಆಧುನಿಕ ಯುಗದ ಭರಾಟೆಯಲ್ಲಿ ನಮ್ಮ ಆಚಾರ - ವಿಚಾರ ಮರೆಯಾಗುತ್ತಿರುವುದರ ನಡೆವೆಯೂ ಈ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ.

ಕುವೆಂಪು ಮಹಾವಿದ್ಯಾಲಯದ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ

ಕಾಲೇಜಿನ ಸಾಂಸ್ಕೃತಿಕ ದಿನಾಚಾರಣೆಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತವಾಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ತಳಿರು ತೋರಣ ಕಟ್ಟಿ ಶೃಂಗರಿಸಿ, ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಿದ್ರು. ಹಳ್ಳಿಗಳಲ್ಲಿ ಸಂಕ್ರಾತಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡುತ್ತಾರೋ ಅದೇ ರೀತಿ, ಭತ್ತ, ರಾಗಿ, ಜೋಳವನ್ನು ರಾಶಿ ಮಾಡಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಕಬ್ಬಿನ ಜಲ್ಲೆಗಳ ನಡುವೆ ನವಧಾನ್ಯಗಳನ್ನಿಟ್ಟು ಪದ್ಧತಿಯಂತೆ ಹಬ್ಬ ಆಚರಿಸಿದ್ದಾರೆ.

sankranti festival celebration at kuvempu university
ಸಂಕ್ರಾಂತಿ ಸಂಭ್ರಮ

ಈ ಸುದ್ದಿಯನ್ನೂ ಓದಿ: ಸಿಎಂ ಮುಂದಿದೆ ಖಾತೆ ಹಂಚಿಕೆ ಸವಾಲು: ಪ್ರಬಲ ಖಾತೆಗೆ ಪಟ್ಟು ಹಿಡಿದಿರುವವರಾರು?

ಪೂಜೆಯ ನಂತರ ಪರಸ್ಪರ ಸದಸ್ಯರು ಎಳ್ಳು-ಬೆಲ್ಲ ಇತ್ಯಾದಿ ಮಿಶ್ರಿತ ಪದಾರ್ಥವನ್ನು ಬಾಯಿಗೆ ಹಾಕುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಾಂಸ್ಕೃತಿಕ ಉಡುಗೆಯಲ್ಲಿ ಕಂಗೂಳಿಸಿ ಸಂಭ್ರಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.