ETV Bharat / state

ಸಾಗರ: ಭಾರತೀಯ ಯೋಧರ ಹತ್ಯೆ ಖಂಡಿಸಿ ಸಂಘ ಪರಿವಾರ ಪ್ರತಿಭಟನೆ - ಸಂಘ ಪರಿವಾರದಿಂದ ಪ್ರತಿಭಟನೆ

ಭಾರತೀಯ ಯೋಧರ ಹತ್ಯೆ ಖಂಡಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಂಘ ಪರಿವಾರದಿಂದ ಪ್ರತಿಭಟನೆ ನಡೆಸಲಾಯಿತು.

Sangha Parivar Protest
ಭಾರತೀಯ ಯೋಧರ ಹತ್ಯೆ ಖಂಡಿಸಿ ಸಾಗರದಲ್ಲಿ ಪ್ರತಿಭಟನೆ
author img

By

Published : Jun 17, 2020, 10:56 PM IST

ಶಿವಮೊಗ್ಗ: ಭಾರತೀಯ ಯೋಧರ ಹತ್ಯೆ ಖಂಡಿಸಿ ಬುಧವಾರ ಸಂಘ ಪರಿವಾರದಿಂದ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ವಿಶ್ವಹಿಂದೂ ಪರಿಷತ್​ನ ಐ.ವಿ. ಹೆಗಡೆ ಮಾತನಾಡಿ, ಚೀನಾ ಸೈನಿಕರ ದುರ್ನೀತಿ ವಿರುದ್ದ ಕೇಂದ್ರ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಭಾರತ ಯಾವಾಗಲೂ ನೆರೆಹೊರೆ ರಾಷ್ಟ್ರಗಳ ಜೊತೆ ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಹೆಚ್ಚು ಒತ್ತು ನೀಡುತ್ತ ಬಂದಿದೆ. ಆದರೆ ನಮ್ಮ ಸೌಹಾರ್ದತೆಯನ್ನು ನೆರೆ ರಾಷ್ಟ್ರಗಳು ದುರುಪಯೋಗಪಡಿಸಿಕೊಳ್ಳಬಾರದು. ಭಾರತೀಯ ಸೈನ್ಯ ದೇಶಭಕ್ತಿಯನ್ನು ಹೊಂದಿದ್ದರೆ, ಚೀನಾ ಸೇನೆ ಕಮ್ಯುನಿಸ್ಟ್ ಮನಸ್ಥಿತಿಯನ್ನು ಹೊಂದಿದೆ ಎಂದರು.

ಚೀನಾ ಸೇನೆಗೆ ಯಾವುದೇ ನೈತಿಕತೆ ಇಲ್ಲ. ಪದೇ ಪದೇ ಭಾರತೀಯ ಸೈನಿಕರ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಚೀನಾದ ವಿರುದ್ದ ಭಾರತ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವ ಕಾಲಘಟ್ಟ ಇದಾಗಿದೆ. ಸರ್ಕಾರದ ಎಲ್ಲ ನಿರ್ಣಯಕ್ಕೂ ದೇಶದ ಜನರು ಬೆಂಬಲ ಸೂಚಿಸುತ್ತೇವೆ. ಅಲ್ಲದೇ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ನಾವು ಸ್ವಯಂಪ್ರೇರಿತವಾಗಿ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿ ಕರೆ ನೀಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.