ಶಿವಮೊಗ್ಗ: ಭಿಕ್ಷುಕಿಯಂತೆ ರಸ್ತೆ ಅಲೆಯುತ್ತಿದ್ದ ಶಿವಮ್ಮ ಅಜ್ಜಿ ಕೊನೆಗೂ ಮಗಳನ್ನು ಸೇರಿದ್ದಾರೆ.
ಹೌದು, ಕಳೆದ ಮೂರು ತಿಂಗಳ ಹಿಂದೆ ಸಾಗರ ಪಟ್ಟಣದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಶಿವಮ್ಮ. ಈ ಅಜ್ಜಿಯನ್ನು ಸಾಗರದ ನಿವಾಸಿ ಮಹೇಶ್ ಎಂಬುವರು ರಕ್ಷಿಸಿ,ಸಾಗರ ಪೊಲೀಸರ ನೆರವಿನಿಂದ ಶಿರಸಿ ಬಳಿಯ ಆಶ್ರಯಧಾಮ ಎಂಬ ಆಶ್ರಮಕ್ಕೆ ಕಳುಹಿಸಲಾಗಿತ್ತು.
ಅಲ್ಲಿ ಅಜ್ಜಿಗೆ ಚೇತರಿಕೆ ಕಂಡು ಬಂದಿದೆ. ನಂತರ ಈ ಅಜ್ಜಿಯ ಮಗಳ ವಿಳಾಸವನ್ನು ಪತ್ತೆ ಮಾಡಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ.