ಶಿವಮೊಗ್ಗ: ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್‌ಗಳನ್ನು ಕದ್ದ ಆರೋಪಿಯನ್ನು 24 ಗಂಟೆಯಲ್ಲಿ ಸಾಗರ ಪೊಲೀಸರು ಬಂಧಿಸಿದ್ದಾರೆ. ಸೊರಬ ರಸ್ತೆಯ ಮೊಬೈಲ್ ವಲ್ಡ್ ಎಂಬ ಮೊಬೈಲ್ ಶಾಪ್‌ನಿಂದ ಮೊಬೈಲ್ ಕಳ್ಳತನ ಆಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಬೆನ್ನಲ್ಲೇ ಚುರುಕು ಕಾರ್ಯಚರಣೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಜೆಪಿ ನಗರದ ನಿವಾಸಿ ವಿನಯ್(24) ಬಂಧಿತ ಆರೋಪಿ. ಈತನಿಂದ 71 ಸಾವಿರ ಮೌಲ್ಯದ ಒಂದು ಲ್ಯಾಪ್ ಟಾಪ್ ಹಾಗೂ 8 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ತಮ್ಮನ ಸಂಸಾರ ಸರಿಪಡಿಸಲು ಹೋಗಿ ಹತ್ಯೆಗೊಳಗಾದ ಅಣ್ಣ: ನಾಲ್ವರ ಬಂಧನ