ETV Bharat / state

ವಿಧಾನಸಭೆ ಚುನಾವಣೆ : ಸಾಗರ ಬಿಜೆಪಿ ಅಭ್ಯರ್ಥಿ ಹಾಲಪ್ಪಗಿಂತ ಪತ್ನಿ ಯಶೋಧ ಶ್ರೀಮಂತೆ

ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಲಪ್ಪ ಹರತಾಳು ಇಂದು ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ನೀಡಿದ್ದಾರೆ.ಹಾಲಪ್ಪನವರು 2,75,11,577 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ.

author img

By

Published : Apr 15, 2023, 10:11 PM IST

sagar-bjp-candidate-halappas-property-details
ವಿಧಾನಸಭೆ ಚುನಾವಣೆ : ಸಾಗರ ಬಿಜೆಪಿ ಅಭ್ಯರ್ಥಿ ಹಾಲಪ್ಪಕ್ಕಿಂತ ಪತ್ನಿ ಯಶೋಧ ಶ್ರೀಮಂತೆ

ಶಿವಮೊಗ್ಗ : ವಿಧಾನಸಭೆ ಚುನಾವಣೆ ಹಿನ್ನೆಲೆ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹಾಲಪ್ಪ ಹರತಾಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯಲ್ಲಿ ಹಾಲಪ್ಪನವರು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರದಲ್ಲಿ ಹಾಲಪ್ಪ ಅವರಿಗಿಂತ ಅವರ ಪತ್ನಿ ಯಶೋಧ ಅವರು ಹೆಚ್ಚು ಆಸ್ತಿ ಹೊಂದಿರುವುದಾಗಿ ತೋರಿಸಲಾಗಿದೆ. ಹಾಲಪ್ಪನವರು 2,75,11,577 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಯಶೋಧ ಅವರು 3,49,90,897 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಹಾಲಪ್ಪ ಅವರ ತಾಯಿಯವರು 67,91,324 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಹಾಲಪ್ಪ ಬಳಿ 10 ಲಕ್ಷ ರೂ. ನಗದು, ಇವರ ಪತ್ನಿ ಬಳಿ 9.50 ಲಕ್ಷ ರೂ. ನಗದು ಹಾಗೂ ಇವರ ತಾಯಿಯ ಬಳಿ 2 ಲಕ್ಷ ರೂ. ನಗದು ಇದೆ. ಹಾಲಪ್ಪನವರ ಬ್ಯಾಂಕ್ ನಲ್ಲಿ 96,87,525 ಲಕ್ಷ ರೂ. ಠೇವಣಿ ಇದೆ. ಇವರ ಪತ್ನಿ ಬಳಿ 22,14,546 ಲಕ್ಷ ರೂ. ಠೇವಣಿ ಇದೆ. ಹಾಲಪ್ಪ ಹೆಸರಿನಲ್ಲಿ 63,500 ರೂ. ಮೌಲ್ಯದ ಷೇರು ಬಾಂಡ್ ಗಳಿವೆ. ಇವರ ಪತ್ನಿ ರವರ ಬಳಿ 58,25,711 ಲಕ್ಷ ರೂಪಾಯಿ ಮೌಲ್ಯದ ಷೇರುಗಳಿವೆ. ಇವರ ತಾಯಿ ಬಳಿ 1,500 ರೂ. ಷೇರು ಬಾಂಡ್ ಇದೆ ಎಂದು ಹೇಳಲಾಗಿದೆ. ಬೆಂಗಳೂರಿನ ವಾಸದ ಮನೆಗೆ 4 ಲಕ್ಷ ರೂ. ಮುಂಗಡ ಹಣ ‌ನೀಡಿದ್ದಾರೆ. ಹಾಲಪ್ಪ ಹಾಗೂ ಯಶೋಧ ಅವರ ಬಳಿ ತಲಾ ಒಂದೊಂದು ಕಾರು ಇದೆ.

ಚಿನ್ನಾಭರಣ ವಿವರ : ಹಾಲಪ್ಪ ಅವರ ಬಳಿ 200 ಗ್ರಾಂ ಚಿನ್ನಾಭರಣ ಇದೆ. ಪತ್ನಿ ಯಶೋಧ ಅವರ ಬಳಿ‌ 1.180 ಗ್ರಾಂ ಚಿನ್ನಾಭರಣ ಜೊತೆಗೆ 5 ಕೆ.ಜಿ ಬೆಳ್ಳಿಯ ಪೂಜಾ ಸಾಮಗ್ರಿಗಳಿವೆ. ಇವರ ತಾಯಿಯ ಬಳಿ 890 ಗ್ರಾಂ ಚಿನ್ನಾಭರಣವಿದೆ ಎಂದು ಮಾಹಿತಿ ನೀಡಿದ್ದಾರೆ.

ಜಮೀನುಗಳ ವಿವರ : ಹಾಲಪ್ಪನವರ ಹೆಸರಿನಲ್ಲಿ 61,35,000 ರೂ. ಮೌಲ್ಯದ ಕೃಷಿ ಭೂಮಿ ಇದೆ. ಪತ್ನಿ ಬಳಿ 8,25,000 ರೂ. ಮೌಲ್ಯದ ಕೃಷಿ ಭೂಮಿ ಇದೆ. ಇವರ ತಾಯಿಯ ಬಳಿ 2 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ ಇದೆ. ಹಾಲಪ್ಪನವರ ಬಳಿ 3.45 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಇವರ ಪತ್ನಿ ಬಳಿ 1.20 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಇದೆ. ಹಾಲಪ್ಪನವರ ಬಳಿ 12 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಇದೆ. ಇವರ ಪತ್ನಿ ಹೆಸರಿನಲ್ಲಿ 44 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡ ಇದೆ.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.