ETV Bharat / state

ಶಿವಮೊಗ್ಗದಲ್ಲಿ ರೌಡಿ ಪರೇಡ್: ಬಾಲ ಬಿಚ್ಚದಂತೆ ಎಸ್​ಪಿ ಎಚ್ಚರಿಕೆ - Rowdy Parade in Shimoga

ಶಿವಮೊಗ್ಗದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆ ರೌಡಿಗಳ ಪರೇಡ್ ನಡೆಸಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Rowdy Parade in Shimoga
ಶಿವಮೊಗ್ಗದಲ್ಲಿ ರೌಡಿ ಪರೇಡ್
author img

By

Published : Feb 4, 2021, 4:40 PM IST

ಶಿವಮೊಗ್ಗ: ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್​ ಇಲಾಖೆ ವತಿಯಿಂದ ರೌಡಿಗಳ ಪರೇಡ್ ನಡೆಸಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ಶಿವಮೊಗ್ಗದಲ್ಲಿ ರೌಡಿ ಪರೇಡ್

ಮೂರು ತಿಂಗಳ ಹಿಂದೆ ನಗರದಲ್ಲಿ ನಡೆದ ಸಣ್ಣ ಜಗಳವೊಂದು ಕೋಮು ಗಲಭೆ ಆತಂಕವನ್ನು ಸೃಷ್ಟಿಸಿತ್ತು. ಇದಾದ ಬಳಿಕ ಕೆಲ ದಿನಗಳ ಹಿಂದೆ ಕುಡಿದ ಅಮಲಿನಲ್ಲಿ ಓರ್ವ ಯುವಕನ ಕೊಲೆಯೂ ನಡೆದಿತ್ತು.

ಈ ಹಿನ್ನೆಲೆ 170ಕ್ಕೂ ಹೆಚ್ಚು ರೌಡಿ ಶೀಟರ್​ಗಳನ್ನು ಡಿಎಆರ್ ಮೈದಾನದಲ್ಲಿ ಸೇರಿಸಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಯಾರಾದರೂ ಸಣ್ಣ ಗಲಾಟೆ ಮಾಡಿದ್ದು ತಿಳಿದುಬಂದರೂ ಹಳೇ ಪ್ರಕರಣಗಳಲ್ಲಿ ಮತ್ತೆ ಸೇರಿಸಿ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ಇದೇ ವೇಳೆ ಬಾರ್ ಅಂಡ್ ರೆಸ್ಟೋರೆಂಟ್​ಗಳಲ್ಲಿ ಹಾಗೂ ಅಂಗಡಿಗಳ ಎದುರು ಸಿಸಿ ಕ್ಯಾಮರಾ ಅಳವಡಿಸುವಂತೆ ಎಸ್​ಪಿ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.