ETV Bharat / state

ತೋಟದಲ್ಲಿನ ಒಂಟಿ ಮನೆಯೇ ಟಾರ್ಗೆಟ್​: ಲಕ್ಷಾಂತರ ರೂ. ಹಣ ದೋಚಿದ ದರೋಡೆಕೋರರು

ತೋಟದಲ್ಲಿನ ಒಂಟಿ ಮನೆಗೆ ನುಗ್ಗಿ, ಹಲ್ಲೆ ನಡೆಸಿದ ದರೋಡೆಕೋರರು ಹಣ ದೋಚಿ ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

robbery-in-shivamogga-chikkamatti-village
ಲಕ್ಷಾಂತರ ರೂ. ಹಣ ದೋಚಿದ ದರೋಡೆಕೋರರು
author img

By

Published : Aug 4, 2021, 4:21 AM IST

ಶಿವಮೊಗ್ಗ: ನಾಲ್ವರು ದರೋಡೆಕೋರರು ತೋಟದಲ್ಲಿನ ಒಂಟಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ತಾಲೂಕು ಚಿಕ್ಕಮಟ್ಟಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಟ್ಟಿ ಗ್ರಾಮದ ಜಯಣ್ಣ ಗೌಡ ಎಂಬುವರು ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಮನೆಗೆ ಎರಡು ಬೈಕ್​ನಲ್ಲಿ ಬಂದ ನಾಲ್ವರು ಏಕಾಏಕಿ ಮನೆಗೆ ನುಗ್ಗಿ ಹಣ ನೀಡುವಂತೆ ಕೇಳಿದ್ದಾರೆ. ಹಣ ಇಲ್ಲ ಎನ್ನುತ್ತಿದ್ದಂತೆ ಜಯಣ್ಣನ ಮೊಮ್ಮಗನನ್ನು ಹಿಡಿದು ಬೆದರಿಸಿ, ಹಣ ನೀಡದೆ ಹೋದರೆ ಕೊಲೆ ಮಾಡುವುದಾಗಿ ಬೆದರಿಸಿ ಮನೆಯಲ್ಲಿದ್ದ ಹಣ, ಒಡವೆ ಕೇಳಿದ್ದಾರೆ.

ಈ ವೇಳೆಗೆ ತೋಟದಲ್ಲಿದ್ದ ಜಯಣ್ಣ ಹಾಗೂ ಮಗ ಗಿರೀಶ್ ಮನೆಗೆ ಬರುತ್ತಿದ್ದಂತೆಯೇ ಜಯಣ್ಣನ ಮೇಲೆ ಹಾಗೂ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಜಯಣ್ಣನಿಗೆ ರಾಡ್​​ನಿಂದ ಹಲ್ಲೆ ನಡೆಸಿ, ಹಣ ದೋಚಿ ಪರಾರಿಯಾಗಿದ್ದಾರೆ. ಗಾಯಗೊಂಡ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಯಣ್ಣ ಇತ್ತೀಚೆಗೆ ಜಮೀನು ಮಾರಿದ ಹಣ ಮನೆಯಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದವರೇ ಈ ಕೃತ್ಯ ಎಸಗಿರಬಹುದೆಂಬ ಅನುಮಾನ ಮೂಡಿದೆ. ಖದೀಮರು 10 ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆ:

ಖದೀಮರು ದರೋಡೆಗೆ ಬರುತ್ತಿರುವುದು ಗ್ರಾಮದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಲ್ಲಿ ಒಂದು ಬೈಕ್ ಮಾತ್ರ ಕಾಣಿಸಿ‌ಕೊಂಡಿದೆ. ಈ ಕುರಿತು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.