ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಹಳೆ ವೈಷಮ್ಯದ ಹಿನ್ನೆಲೆ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಓರ್ವ ಗಾಯಗೊಂಡಿದ್ದಾನೆ.
ಸಲ್ಮಾನ್(24) ಗಾಯಗೊಂಡವ. ಈತ ಇಂದು ಗಾಂಜಾ ಮಾರಾಟ ಕೇಸ್ನಲ್ಲಿ ಕಾರಾಗೃಹಕ್ಕೆ ಬಂದಿದ್ದ. ಈತನ ವಿರುದ್ದ ಹಳೆ ವೈಷಮ್ಯ ಕಾರಣ ಈಗಾಗಲೇ ಅರೆಸ್ಟ್ ಆಗಿದ್ದ ಸುಕ್ಕ ಕಲೀಂ ಹಾಗೂ ಗೌಸ್ ಎಂಬುವರು ಸಲ್ಮಾನ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಇದರಿಂದ ಸಲ್ಮಾನ್ ಮೂಗಿಗೆ ಗಾಯವಾಗಿದೆ. ತಕ್ಷಣ ಕಾರಾಗೃಹದ ಸಿಬ್ಬಂದಿ ಗಲಾಟೆ ಬಿಡಿಸಿದ್ದಾರೆ.
ಈ ವೇಳೆಗಾಗಲೇ ಹಲ್ಲೆ ನಡೆಸಿದವರು ಸಲ್ಮಾನ್ ಕುಟುಂಬದವರಿಗೆ ಕರೆ ಮಾಡಿ ಆತನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನು ತಿಳಿದ ಆತನ ಕುಟುಂಬಸ್ಥರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಕೆಲವರು ಕಾರಾಗೃಹದ ಮುಂದೆ ಹೋಗಿ ಗಲಾಟೆ ನಡೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ತುಂಗಾನಗರ ಸಿಪಿಐ ದೀಪಕ್ ಕಾರಾಗೃಹದ ಬಳಿ ಗಲಾಟೆ ಮಾಡುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 10 ವರ್ಷದಿಂದ ಈ ಗ್ರಾಮದಲ್ಲಿ ಮದುವೆಗಳೇ ನಡೆದಿಲ್ಲ: ಕಂಕಣ ಭಾಗ್ಯವಿಲ್ಲದೆ ಯುವಕರ ವಿರಹವೇದನೆ