ETV Bharat / state

ಶಿವಮೊಗ್ಗ: ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಆರೋಪ - ಶಿವಮೊಗ್ಗದ ಮಾರಿಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ

ಶಿವಮೊಗ್ಗದ ಪ್ರಸಿದ್ಧ ಮಾರಿಕಾಂಬ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ನಿನ್ನೆಯಿಂದ ಜಾತ್ರೋತ್ಸವ ಪ್ರಾರಂಭವಾಗಿದ್ದು, ಇನ್ನೂ ಮೂರು ದಿನಗಳ ಕಾಲ ಜಾತ್ರೆ ಮುಂದುವರೆಯುತ್ತದೆ.

marijathra
ಶಿವಮೊಗ್ಗದ ಮಾರಿಜಾತ್ರೆ
author img

By

Published : Mar 23, 2022, 3:58 PM IST

Updated : Mar 23, 2022, 5:29 PM IST

ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ಧ ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಕೆಲವು ಹಿಂದೂ ಸಂಘಟನೆಗಳು ಮುಂದಾಗಿವೆ ಎನ್ನಲಾಗ್ತಿದೆ. ಹಿಂದೂ ಸಂಘಟನೆಗಳ ಈ ನಿರ್ಧಾರ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆಯ ಮುಖಂಡರು ನಿರ್ಧಾರವನ್ನು ಸಮರ್ಥಿಸಿಕೊಂಡರೆ, ಇನ್ನೊಂದೆಡೆ, ಇದೊಂದು ಬಡ ವ್ಯಾಪಾರಿಗಳ ಬದುಕಿಗೆ ತೊಂದರೆ ತಂದೊಡ್ಡುವ ನಿರ್ಧಾರ ಎಂಬ ಮಾತುಗಳು ಕೇಳಿಬಂದಿವೆ.

ಜಾತ್ರೆಯ ಟೆಂಡರ್​ ಪಡೆದ ಹಿಂದೂ ಕಾರ್ಯಕರ್ತ: ಮಾರಿಕಾಂಬ ಜಾತ್ರೆಯ ಮಳಿಗೆ ಹರಾಜು ಗುತ್ತಿಗೆಯನ್ನು ಮೊದಲು ಚಿಕ್ಕಣ್ಣ ಎಂಬಾತ 9 ಲಕ್ಷದ 1001 ರೂ. ಗೆ ಪಡೆದುಕೊಂಡಿದ್ದರು. ಆದರೆ, ದುಷ್ಕರ್ಮಿಗಳಿಂದ ತನಗೆ ಜೀವ ಬೆದರಿಕೆ ಇದೆ. ಈ ಟೆಂಡರ್ ತನಗೆ ಬೇಡ ಅಂತಾ ಚಿಕ್ಕಣ್ಣ ಮಾರಿಕಾಂಬ ಸೇವಾ ಸಮಿತಿಗೆ ಹೇಳಿದ್ದರು. ಹಾಗಾಗಿ ಈ ಗುತ್ತಿಗೆಯನ್ನು ಹಿಂದೂ ಸಂಘಟನೆಯ ನಾಗರಾಜ್ ಎಂಬವರು ಪಡೆದುಕೊಂಡಿದ್ದಾರೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಎಸ್​ ಕೆ ಮರಿಯಪ್ಪ ಹೇಳಿದ್ದಾರೆ.

ಶಿವಮೊಗ್ಗದ ಮಾರಿಕಾಂಬ ಜಾತ್ರೆ ಮತ್ತು ಟೆಂಡರ್​ ಪ್ರಕ್ರಿಯೆ ಕುರಿತು ಸೇವಾ ಸಮಿತಿಯವರಿಂದ ಮಾಹಿತಿ

ನಾಗರಾಜ್ ಅವರು ಟೆಂಡರ್ ಹಣವನ್ನು ಸಮಿತಿಗೆ ನೀಡಿದ್ದಾರೆ. ಇದರಿಂದ ಈಗ ಜಾತ್ರೆಯ ಟೆಂಡರ್ ನಾಗರಾಜ್ ಅವರಿಗೆ ಸೇರಿದ್ದು, ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ಮಳಿಗೆ ಹಾಕಲು ಅವಕಾಶ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಇಲ್ಲ, ಕಲ್ಲಿದ್ದಲು ಕೊರತೆಯೂ ಇಲ್ಲ: ಸಚಿವ ಸುನೀಲ್ ಕುಮಾರ್

Last Updated : Mar 23, 2022, 5:29 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.