ETV Bharat / state

ಮೈತ್ರಿಯಿಂದ ಹೊರಬಂದವರು ಬಿಜೆಪಿ ಅಳಿಯಂದಿರು... ಅವರನ್ನೂ ಸಂಬಾಳಿಸಬೇಕಿದೆ... ಈಶ್ವರಪ್ಪ

ಮೈತ್ರಿ ಸರ್ಕಾರ ಪತನವಾಗಲು ಪ್ರಮುಖರಾದ ಅತೃಪ್ತ ಶಾಸಕರು ಎಂದಾದವರನ್ನು ಸೇರಿಸಿಕೊಂಡು, ಯಾರಿಗೂ ಬೇಸರವಾಗದಂತೆ ಸಂಪುಟ ರಚನೆ ಮಾಡುತ್ತೇವೆ. ಬಿಜೆಪಿ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತೆ, ಹಿಂದಿನ ಮೈತ್ರಿ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಕೆ.ಎಸ್​​.ಈಶ್ವರಪ್ಪ ಹರಿಹಾಯ್ದರು.

ಶಾಸಕ ಕೆ.ಎಸ್​ ಈಶ್ವರಪ್ಪ
author img

By

Published : Aug 5, 2019, 3:43 PM IST

ಶಿವಮೊಗ್ಗ: ಬಿಜೆಪಿಗೆ ಬಂದಿರುವ 18 ಜನ ಅಳಿಯಂದಿರನ್ನು ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಈ ಮೂಲಕ ಅತೃಪ್ತರು ಬಿಜೆಪಿ ಪರವಾಗಿಯೇ ರಾಜೀನಾಮೆಯನ್ನು ನೀಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

ಶಾಸಕ ಕೆ.ಎಸ್​ ಈಶ್ವರಪ್ಪ

18 ಶಾಸಕರು ನಮ್ಮನ್ನು ನಂಬಿ ಬಂದಿದ್ದಾರೆ. ಅವರಿಗೂ ಮಂತ್ರಿ‌ ಸ್ಥಾನ ನೀಡುವ ಮೂಲಕ ಅವರನ್ನು ಸಂಬಾಳಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು. ನಮ್ಮನ್ನು ನಂಬಿ ಬಂದವರನ್ನು ಅರ್ಧದಲ್ಲಿಯೇ ಕೈ ಬಿಡುವುದಿಲ್ಲ. ಅವರೆಲ್ಲ ಹಿಂದಿನ ಮೈತ್ರಿ ಸರ್ಕಾರ ಸರಿಯಾಗಿ ಕೆಲಸ ನಡೆಸಿಲ್ಲ ಎಂದು ಬೇಸರಗೊಂಡು ಬಂದಿದ್ದಾರೆ. ಅವರನ್ನು‌ ಸೇರಿಸಿಕೊಂಡು ಸರ್ಕಾರ ನಡೆಸಲಾಗುವುದು ಎಂದರು. ರಾಜ್ಯದಲ್ಲಿ‌ ಈಗ ಸಿಎಂ ಆದರೂ ಇದ್ದಾರೆ, ಹಿಂದೆ ಸರ್ಕಾರವೇ ಇರಲಿಲ್ಲ, ಸಿಎಂ ಒಬ್ಬರೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ‌ ನೀಡಿ ಆ ಭಾಗದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾ ಇದ್ದಾರೆ. ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಮಾಡದೇ ಏಕ ವ್ಯಕ್ತಿ ಸರ್ಕಾರ ನಡೆಸುತ್ತಿದ್ದು, ರಾಜ್ಯದ ಜನತೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿ ವಿರೋಧ ಪಕ್ಷಗಳಿಗೆ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಇಂದು ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ರಾಜ್ಯಕ್ಕೆ ಬೇಕಾದ ಅನುದಾನವನ್ನು ತರಲಿದ್ದಾರೆ. ಅದೇ ರೀತಿ ಇನ್ನೂಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಒಂದು ಕಡೆ ಬರ ಇದ್ದರೆ ಇನ್ನೂಂದು ಕಡೆ ಅತಿವೃಷ್ಟಿ ಇದೆ. ಇದರಿಂದ ಎಲ್ಲ ಸಮಸ್ಯೆಗಳಿಗೂ ಬಿಜೆಪಿ‌‌ ಸರ್ಕಾರ ಪರಿಹಾರ ಒದಗಿಸಲಿದೆ ಎಂದರು.

Intro:ಬಿಜೆಪಿಗೆ ಬಂದಿರುವ 18 ಜನ ಅಳಿಯಂದಿರನ್ನು ಸೇರಿಸಿ ಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಈ ಮೂಲಕ ಅತೃಪ್ತರು ಬಿಜೆಪಿ ಪರವಾಗಿಯೇ ರಾಜೀನಾಮೆಯನ್ನು ನೀಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿ ಕೊಂಡಿದ್ದಾರೆ.18 ಶಾಸಕರು ನಮ್ಮನ್ನು ನಂಬಿ ಬಂದಿದ್ದಾರೆ. ಅವರಿಗೂ ಮಂತ್ರಿ‌ ಸ್ಥಾನ ನೀಡುವ ಮೂಲಕ ಅವರನ್ನು ಸಂಭಾಳಿಸಿ ಕೊಂಡು ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದರು. ನಮ್ಮನ್ನು ನಂಬಿ ಬಂದವರನ್ನು ಅರ್ಧದಲ್ಲಿಯೇ ಕೈ ಬಿಡುವುದಿಲ್ಲ. ಅವರೆಲ್ಲಾ ಹಿಂದಿನ ಮೈತ್ರಿ ಸರ್ಕಾರ ಸರಿಯಾಗಿ ಕೆಲ್ಸ ನಡೆಸಿಲ್ಲ ಎಂದು ಬಂದಿದ್ದಾರೆ. ಅವರನ್ನು‌ ಸೇರಿಸಿಕೊಂಡು ಸರ್ಕಾರ ನಡೆಸಲಾಗುವುದು ಎಂದರು.

Body:ರಾಜ್ಯದಲ್ಲಿ‌ ಈಗ ಸಿಎಂ ಆದ್ರೂ ಇದ್ದಾರೆ. ಹಿಂದೆ ಸರ್ಕಾರವೇ ಇರಲಿಲ್ಲ, ಸಿಎಂ ಒಬ್ಬರೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ‌ ನೀಡಿ ಆ ಭಾಗದ ಜನರಿಗೆ ಧೈರ್ಯ ತುಂಬುವ ಕೆಲ್ಸ ಮಾಡ್ತಾ ಇದ್ದಾರೆ ಎನ್ನುವ ಮೂಲಕ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಮಾಡದೆ ಏಕ ವ್ಯಕ್ತಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳಿವ ವಿರೋಧ ಪಕ್ಷಗಳಿಗೆ ಮಾತಿನ ಮೂಲಕ ಚಾಟಿ ಬಿಸಿದ್ದಾರೆ.

Conclusion:ಇಂದು ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ರಾಜ್ಯಕ್ಕೆ ಬೇಕಾದ ಅನುದಾನವನ್ನು ತರಲಿದ್ದಾರೆ. ಅದೇ ರೀತಿ ಇನ್ನೂಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಒಂದು ಕಡೆ ಬರ ಇದ್ದರೆ ಇನ್ನೂಂದು ಕಡೆ ಅತಿವೃಷ್ಟಿ ಇದೆ. ಇದರಿಂದ ಎಲ್ಲಾ ಸಮಸ್ಯೆಗಳಿಗೂ ಬಿಜೆಪಿ‌‌ ಸರ್ಕಾರ ಪರಿಹಾರ ಒದಗಿಸಲಿದೆ ಎಂದರು.

ಬೈಟ್: ಕೆ.ಎಸ್.ಈಶ್ವರಪ್ಪ.‌ಶಾಸಕರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.