ಶಿವಮೊಗ್ಗ: ಲಾಕ್ಡೌನ್ನಿಂದಾಗಿ ಕ್ರೈಸ್ತ ಸಮುದಾಯದ ಗುರುಗಳಾದ ಸಭಾ ಪಾಲಕರಿಗೆ ಆರ್ಥಿಕ ನೆರವು ಹಾಗೂ ದಿನಸಿ ಕಿಟ್ ವಿತರಿಸುವಂತೆ ಒತ್ತಾಯಿಸಿ ಸಾಗರದಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಮನವಿ ಮಾಡಿದೆ.
ಸಾಗರ ಉಪ ವಿಭಾಗಾಧಿಕಾರಿಗಳಿಗೆ ಅಖಿಲ ಭಾರತ ಕ್ರೈಸ್ತ ಮಹಾಸಭಾದ ವತಿಯಿಂದ ಮನವಿ ಸಲ್ಲಿಸಲಾಯಿತು. ಲಾಕ್ಡೌನ್ಗೆ ಬೆಂಬಲ ಸೂಚಿಸಿ ಕ್ರೈಸ್ತ ಧರ್ಮಪಾಲಕರು ಮನೆಯಲ್ಲಿ ಉಳಿದ ಕಾರಣ ಅವರ ಜೀವನ ನಡೆಸುವುದು ಕಷ್ಟವಾಗಿದೆ. ಇದರಿಂದ ರಾಜ್ಯ ಸರ್ಕಾರ ಕ್ರೈಸ್ತ ಧರ್ಮಪಾಲಕರ ನೆರವಿಗೆ ಧಾವಿಸಿ, ಆರ್ಥಿಕ ಸಹಾಯ ಹಾಗೂ ದಿನಸಿ ಕಿಟ್ ವಿತರಿಸುವಂತೆ ಮನವಿ ಮಾಡಿಕೊಂಡಿದೆ.