ETV Bharat / state

ಕೋವಿಡ್ ಸೋಂಕಿತರ ಜತೆ ಆಸ್ಪತ್ರೆಯಲ್ಲಿ ತಂಗಲು ಅವಕಾಶ ನೀಡುವಂತೆ ಸಂಬಂಧಿಕರ ಕೋರಿಕೆ - Patients relatives news

ಹೀಗೆ ಆದರೆ ನಮ್ಮ ತಂದೆ- ತಾಯಿ, ಸಹೋದರರು ಹಾಗೂ ಸಂಬಂಧಿಕರನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನಮಗೆ ಒಳಗೆ ಹೋಗಲು ಅವಕಾಶ ನೀಡಿ..

ಕೊರೊನಾ
ಕೊರೊನಾ
author img

By

Published : May 4, 2021, 6:05 PM IST

ಶಿವಮೊಗ್ಗ : ಕೋವಿಡ್ ಸೋಂಕಿತರ ಜೊತೆ ಆಸ್ಪತ್ರೆಯಲ್ಲಿ ತಂಗಲು ಒಬ್ಬರಿಗೆ ಅವಕಾಶ ನೀಡಬೇಕೆಂದು ಮೆಗ್ಗಾನ್ ಆಸ್ಪತ್ರೆ ಮುಂಭಾಗ ಸೋಂಕಿತರ ಸಂಬಂಧಿಕರು ಪಿಪಿಇ ಕಿಟ್ ಹಿಡಿದು ಆಗ್ರಹಿಸಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಜೊತೆ ಓರ್ವರು ಸಹಾಯಕರಾಗಿ ಇರಲೇಬೇಕಾದ ಅನಿವಾರ್ಯತೆ ಇದೆ. ಸೋಂಕಿತರು ಶೌಚಾಲಯಕ್ಕೆ ಹೋಗಲು, ಊಟ ಮಾಡಿಸುವುದು ಸೇರಿದಂತೆ ಇತರೆ ಸಹಾಯಕ್ಕೆ ಇರಲೇಬೇಕಿದೆ.

ನರ್ಸ್‌ಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಮಾತ್ರೆ ಔಷಧಿ ನೀಡುವುದಕ್ಕಾದರೂ ನಾವು ಇರಲೇಬೇಕಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ಒಳಗೆ ಹೋಗಲು ಬಿಡುವುದಿಲ್ಲ. ಹೀಗೆ ಆದರೆ ನಮ್ಮ ತಂದೆ- ತಾಯಿ, ಸಹೋದರರು ಹಾಗೂ ಸಂಬಂಧಿಕರನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನಮಗೆ ಒಳಗೆ ಹೋಗಲು ಅವಕಾಶ ನೀಡಿ ಎಂದು ಆಗ್ರಹಿಸಿದರು.

ಕೋವಿಡ್ ಸೋಂಕಿತರ ಜತೆ ಆಸ್ಪತ್ರೆಯಲ್ಲಿ ತಂಗಲು ಅವಕಾಶ ನೀಡುವಂತೆ ಸಂಬಂಧಿಕರ ಕೋರಿಕೆ

ಈ ವೇಳೆ ಸೋಂಕಿತರ ಸಂಬಂಧಿಗಳು ಎಸ್‌ಪಿ ಕಚೇರಿಗೆ ಹೋಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಹರೀಶ್ ಪಟೇಲ್ ಆಗಮಿಸಿ ಸೋಂಕಿತರ ಸಂಬಂಧಿಕರಿಗೆ ಸಮಾಧಾನ ಮಾಡಲು ಯತ್ನ ಮಾಡಿದರು. ಈ ಕುರಿತು ಸಿಮ್ಸ್ ಆಡಳಿತ ಮಂಡಳಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಸೋಂಕಿತರ ಸಂಬಂಧಿಗಳ ಪ್ರವೇಶಕ್ಕೆ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದ್ದರು:

ಕಳೆದ ನಾಲ್ಕು ದಿನದ ಹಿಂದೆ ಪರಿಷತ್ ಸದಸ್ಯರುಗಳಾದ ಆಯನೂರು ಮಂಜುನಾಥ್ ಹಾಗೂ ರುದ್ರೇಗೌಡ ರವರು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಸೋಂಕಿತರ ಸಂಬಂಧಿಕರಿಗೆ ಒಳಗೆ ಪ್ರವೇಶ ನೀಡಬಾರದು ಎಂದು ಸೂಚಿಸಿದ್ದರು. ಇದರಿಂದ ಸಿಮ್ಸ್ ಒಳ ಪ್ರವೇಶಕ್ಕೆ ತಡೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.