ಶಿವಮೊಗ್ಗ: ಬೆಳಗಾವಿಯ ಪಿರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಾನೂನು ಬಾಹಿರವಾಗಿ ತೆಗೆದುಕೊಂಡು ಹೋಗಲಾಗಿದೆ. ಇದರಿಂದ ಅದೇ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಪ್ರತಿಭಟನೆ ನಡೆಸಿದೆ.
ಪಿರನವಾಡಿ ಗ್ರಾಮದಲ್ಲಿ ಎಂಇಎಸ್ರವರ ಬೆದರಿಕೆಗೆ ಹೆದರಿರುವ ಬೆಳಗಾವಿ ಜಿಲ್ಲಾಡಳಿತ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಏಕಾಏಕಿ ತೆಗೆದುಕೊಂಡು ಹೋಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ಮಡಿದ ವೀರಯೋಧ. ಇಂತಹ ಯೋಧನಿಂದಲೇ ರಾಜ್ಯದಲ್ಲಿ ಬ್ರೀಟಿಷರ ಹೋರಾಟಕ್ಕೆ ಒಂದು ಮುನ್ನುಡಿ ದೂರೆತಂತೆ ಆಗಿದೆ. ಇದರಿಂದ ಪಿರನವಾಡಿಯ ಸ್ವ ಕ್ಷೇತ್ರದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಹೋದಾಗ ಎಂಇಎಸ್ ಗೂಂಡಾಗಳು ಗಲಾಟೆ ನಡೆಸಿದ್ದಾರೆ. ಇದರಿಂದ ಬೆದರಿದ ಪೊಲೀಸ್ ಇಲಾಖೆಯು ರಾಯಣ್ಣನ ಅಭಿಮಾನಿಗಳನ್ನೇ ಥಳಿಸಿ, ಪ್ರತಿಮೆಯನ್ನು ವಶಕ್ಕೆ ಪಡೆದುಕೊಂಡಿದೆ. ಇದು ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳಿಗೆ ಮಾಡಿದ ಅಪಮಾನವಾಗಿದೆ. ಪೊಲೀಸರು ರಾಯಣ್ಣನ ಪ್ರತಿಮೆಯನ್ನು ಗೌರವಯುತವಾಗಿ ತಂದು ಪ್ರತಿಷ್ಠಾಪಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯು ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆಯ ಜಿಲ್ಲಾಧ್ಯಕ್ಷ ರಾಮಕೃಷ್ಣ ಮೂಡ್ಲಿಯವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಶರತ್, ರಾಕೇಶ್, ಅಣ್ಣಯ್ಯ, ಪ್ರಕಾಶ್, ಕೃಷ್ಣ, ಬಸವರಾಜ್ ಇತರರು ಹಾಜರಿದ್ದರು.