ಶಿವಮೊಗ್ಗ: ಕಾಳ ಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಗೋದಾಮು ಮೇಲೆ ಪೊಲೀಸರು ಹಾಗೂ ನಾಗರಿಕ ಆಹಾರ ಪೂರೈಕೆ ಇಲಾಖೆ ಜಂಟಿಯಾಗಿ ದಾಳಿ ನಡೆಸಿ 6 ಜನರನ್ನು ಬಂಧಿಸಿರುವ ಘಟನೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಡೆದಿದೆ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಪೊಲೀಸರು, ಗಾಡಿಕೊಪ್ಪದ ಗೋದಾಮಿನಲ್ಲಿದ್ದ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುವಾಗ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ತೀಕೇಯನ್ ಅಲಿಯಾಸ್ ಕಾರ್ತಿಕ್ (53), ಗೋಪಿ (23), ಸೀತಾರಾಮ (40), ಕಾಂತರಾಜ (32), ಯುವರಾಜ (28), ಶ್ರೀನಿಧಿ (20) ಎಂಬುವರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ 3.70 ಲಕ್ಷ ರೂ ಮೌಲ್ಯದ ಒಟ್ಟು 338 ಚೀಲಗಳಲ್ಲಿ ತುಂಬಿದ್ದ 168 ಕ್ವಿಂಟಲ್ ತೂಕದ ಅಕ್ಕಿ, ಎರಡು ಕ್ಯಾಂಟರ್ ವಾಹನ, 2 ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಒಂದು ಚೀಲ ಹೊಲಿಗೆ ಯಂತ್ರವನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಪಡಿತರ ಅಕ್ಕಿ ಮಾರಾಟ, ಬೋಗಸ್ ರೇಷನ್ ಕಾರ್ಡ್ ರದ್ಧತಿಗೆ ಆಗ್ರಹಿಸಿ ಅರೆಬೆತ್ತಲೆ ಹೋರಾಟ