ಶಿವಮೊಗ್ಗ: ಅತ್ಯಾಚಾರ ಪ್ರಕರಣದ ಆರೋಪಿ ಸುರೇಶ ಎಂಬಾತ ವೈದ್ಯಕೀಯ ತಪಾಸಣೆ ವೇಳೆ ಪರಾರಿಯಾಗಿದ್ದ. ಹೀಗಾಗಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪರಾರಿಯಾಗಿದ್ದ ಸುರೇಶ್ನನ್ನು ಪೊಲೀಸರು ಕೇರಳದ ಕಾಸರಗೋಡಿನ ಅಣಗೂರಿನಲ್ಲಿ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.