ಶಿವಮೊಗ್ಗ: ಭದ್ರಾ ಜಲಾಶಯಕ್ಕೆ ನಟ ದರ್ಶನ್ ಜತೆ ಭೇಟಿ ನೀಡಿದ್ದ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟುವ ಮೂಲಕ ಅಭಿಮಾನ ವ್ಯಕ್ತಪಡಿಸಿದಳು.
ಇದೇ ವೇಳೆ, ಚಿಕ್ಕಣ್ಣ ಜೊತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ನಟ ದರ್ಶನ್ ವೈಲ್ಡ್‌ಲೈಫ್ ಸಫಾರಿ ಹಾಗೂ ಫೋಟೊಗ್ರಫಿಗೆಂದು ಜಿಲ್ಲೆಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ.