ಶಿವಮೊಗ್ಗ: ಕಳೆದ ಏಳು ದಿನಗಳಿಂದಲೂ ಎಡಬಿಡದೇ ಸುರಿಯುತ್ತಿದ್ದ ವರುಣ ಜಿಲ್ಲೆಯಲ್ಲಿ ಇಂದು ಕೊಂಚ ಬಿಡುವು ನೀಡಿದ್ದಾನೆ.
ಬೆಳಗ್ಗೆಯಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ತುಂಗಾ ನದಿ ನೀರಿನ ಹರಿವಿನ ಪ್ರಮಾಣ ಸ್ವಲ್ಪ ತಗ್ಗಿದೆ. ನಿನ್ನೆ ಸೇತುವೆಗೆ ತಾಗಿಕೊಂಡು ಹರಿಯುತ್ತಿದ್ದ ನೀರು, ಇಂದು ಕಡಿಮೆಯಾಗಿದೆ. ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಮನೆಗಳು ಜಲಾವೃತವಾಗಿ ಆಂತಕದಲ್ಲಿದ್ದ ಜನರಲ್ಲಿ ಸ್ವಲ್ಪ ಆತ್ಮವಿಶ್ವಾಸ ಮೂಡಿದೆ. ನಗರದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಎಂದಿನಂತೆ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ.