ETV Bharat / state

ವೇಶ್ಯಾವಾಟಿಕೆ ದಂಧೆ ಆರೋಪ: ಸಾಗರದಲ್ಲಿ ರೆಸಿಡೆನ್ಸಿ ಮೇಲೆ ಪೊಲೀಸ್​ ದಾಳಿ

ಸಾಗರ ಪಟ್ಟಣದ ‌ರೈಲ್ವೆ ನಿಲ್ದಾಣ ಬಳಿಯ ಖಾಸಗಿ ರೆಸಿಡೆನ್ಸಿಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವೇಶ್ಯಾವಾಟಿಕೆ
author img

By

Published : Aug 16, 2019, 8:01 AM IST

ಶಿವಮೊಗ್ಗ: ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಗರ ಪಟ್ಟಣದ ಖಾಸಗಿ ರೆಸಿಡೆನ್ಸಿಯೊಂದರ ಮೇಲೆ‌ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸಾಗರ ಪಟ್ಟಣದ ‌ರೈಲ್ವೆ ನಿಲ್ದಾಣ ಬಳಿ ಇರುವ ಈ ರೆಸಿಡೆನ್ಸಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಕುರಿತು ಖಚಿತ ಮಾಹಿತಿ ಪಡೆದ ಸಾಗರ ಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ವೇಶ್ಯಾವಾಟಿಕೆ ನಡೆಸಲು ಪ್ರಚೋದನೆ ನೀಡುತ್ತಿದ್ದರೆನ್ನಲಾದ ರೆಸಿಡೆನ್ಸಿಯ ಮ್ಯಾನೇಜರ್​ ಕುಮಾರ್ ಹಾಗೂ ಪ್ರಶಾಂತ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಅವರನ್ನು ಶಿವಮೊಗ್ಗದ ಮಹಿಳಾ‌ ಕೇಂದ್ರದಲ್ಲಿ ಇರಿಸಲಾಗಿದೆ.

ಈ ರೆಸಿಡೆನ್ಸಿಯಲ್ಲಿ ಹಲವು ದಿನಗಳಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸಾಗರದ ಪ್ರೊಬೆಷನರಿ ಎಸ್ಪಿ ಯತೀಶ್ ನೇತೃತ್ವದ ತಂಡ ದಾಳಿ ನಡೆದಿದೆ. ಸಾಗರ ಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್ ರತ್ನಾಕರ್, ಶ್ರೀಧರ್, ಸೀತಮ್ಮ, ಚಾಲಕ ಪ್ರಕಾಶ್ ದಾಳಿಯಲ್ಲಿ ಭಾಗವಹಿಸಿದ್ದರು. ಯತೀಶ್ ಅವರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Intro:ವೇಶ್ಯಾವಾಟಿಕೆ ನಡೆಸುತ್ತಿದ್ದ ರೆಸಿಡೆನ್ಸಿ ಮೇಲೆ ದಾಳಿ: ಇಬ್ಬರ ಬಂಧನ.

ಶಿವಮೊಗ್ಗ: ವೈಶ್ಯವಾಟಿಕೆ ನಡೆಯುತ್ತಿದ್ದ ರೆಸಿಡೆನ್ಸಿ ಮೇಲೆ‌ ದಾಳಿ ನಡೆಸಿ,ಇಬ್ಬರನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಸಾಗರ ಪಟ್ಟಣದ ‌ರೈಲ್ವೆ ನಿಲ್ದಾಣ ಸಮೀಪದ ತಪಸ್ವಿ ರೆಸಿಡೆನ್ಸಿಯಲ್ಲಿ ವೈಶ್ಯವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಪಡೆದ ಸಾಗರ ಪೇಟೆ ಪೊಲಿಸರು ದಾಳಿ ನಡೆಸಿದ್ದಾರೆ.Body: ಈ ವೇಳೆ ವೈಶ್ಯವಾಟಿಕೆ ನಡೆಸಲು ಪ್ರಚೋದನೆ ನಡೆಸುತ್ತಿದ್ದ ರೆಸಿಡೆನ್ಸಿಯ ಮ್ಯಾನೇಜರದ ಕುಮಾರ್ ಹಾಗೂ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಮಹಿಳೆಯರನ್ನು ಶಿವಮೊಗ್ಗದ ಮಹಿಳಾ‌ ಕೇಂದ್ರದಲ್ಲಿ ಇಡಲಾಗಿದೆ. ಈ ರೆಸಿಡೆನ್ಸಿಯಲ್ಲಿ ಹಲವು ದಿನಗಳಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಾಗರದ ಪ್ರೊಫೆಷನರಿ ಎಸ್ಪಿ ಯತೀಶ್ ರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.Conclusion:ದಾಳಿಯಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ
ಹೆಡ್ ಕಾನ್ಸ್ ಟೇಬಲ್ ರತ್ನಾಕರ್, ಶ್ರೀಧರ್, ಸೀತಮ್ಮ, ಚಾಲಕ ಪ್ರಕಾಶ್ ಭಾಗವಹಿಸಿದ್ದರು. ಯತೀಶ್ ರವರ ದಾಳಿಗೆ ಸಾಗರದ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.