ಶಿವಮೊಗ್ಗ: ಜಗತ್ತಿನ ಅತಿ ಎತ್ತರದ ಪ್ರದೇಶವಾಗಿರುವ ಭಾರತದ ಲಡಾಖ್ನ ಖರ್ದುಂಗ್ ಲಾ ಪಾಸ್‌ನ ತುತ್ತತುದಿಯಲ್ಲಿ (17,982 ಅಡಿ ಎತ್ತರ) ದಿ. ಪುನೀತ್ ರಾಜ್ಕುಮಾರ್ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ.
ಕೊರೆಯುವ ಚಳಿ ಹಾಗೂ ಅಪಾಯವನ್ನು ಲೆಕ್ಕಿಸದೇ ಕನ್ನಡ ಹಾಗೂ ಅಪ್ಪು ಮೇಲಿನ ಪ್ರೀತಿಯಿಂದ ಶಿವಮೊಗ್ಗದ ಸ್ನೇಹಿತರ ತಂಡ ಖರ್ದುಂಗ್ ಲಾ ಪಾಸ್ ಪ್ರದೇಶಕ್ಕೆ ತೆರಳಿ ಕನ್ನಡದ ಬಾವುಟವನ್ನು ಹಾರಿಸಿದ್ದಾರೆ.
ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಗೌತಮ್, ಹರೀಶ್, ಕಿರಣ್ ಅವರು ತಮ್ಮ ನೆಚ್ಚಿನ ನಾಯಕನ ಭಾವಚಿತ್ರ ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರ ಪ್ರದೇಶದಲ್ಲಿ ಹಾರಿಸುವ ಸಲುವಾಗಿಯೇ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ: 'ಮಾನ್ಸೂನ್ ರಾಗ' ಬಿಡುಗಡೆ: ಡಾಲಿ, ಡಿಂಪಲ್ ಕ್ವೀನ್ ಅವತಾರಕ್ಕೆ ಅಭಿಮಾನಿಗಳು ಫಿದಾ