ETV Bharat / state

ಪ್ಯಾರಾಲಿಂಪಿಕ್​ನಲ್ಲಿ ಬೆಳ್ಳಿ ಗೆದ್ದ ಸುಹಾಸ್​​.. ಶಿವಮೊಗ್ಗದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ - ಶಿವಮೊಗ್ಗದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಸುಹಾಸ್ ಯಥಿರಾಜ್ ಮೂಲತಃ ಹಾಸನದವರಾಗಿದ್ದು, ತಂದೆ ಇಂಜಿನಿಯರ್ ಆಗಿ ಶಿವಮೊಗ್ಗದಲ್ಲಿ ಕೆಲ ವರ್ಷಗಳ ಕಾಲ ನೆಲೆಸಿದ್ದರು. ಇಂದಿಗೂ ವಿನೋಬಾನಗರದಲ್ಲಿ ಸ್ವಂತ ಮನೆಯಿದ್ದು, ಸುಹಾಸ್ ಅವರ ತಾಯಿ ಇಲ್ಲೇ ವಾಸವಿದ್ದಾರೆ. ಇಂದು ಸುಹಾಸ್​ ಬೆಳ್ಳಿ ಪದಕ ಗೆದ್ದಿರುವುದರಿಂದ ಶಿವಮೊಗ್ಗದಲ್ಲಿ ಸಂಭ್ರಮ ಮನೆಮಾಡಿದೆ.

Public celebrated victory after Suhas yatiraj won silver at Paralympic
ಪ್ಯಾರಾಲಿಂಪಿಕ್​ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್
author img

By

Published : Sep 5, 2021, 1:57 PM IST

Updated : Sep 5, 2021, 2:07 PM IST

ಶಿವಮೊಗ್ಗ: ಪ್ಯಾರಾಲಿಂಪಿಕ್​ನಲ್ಲಿ ಕನ್ನಡಿಗ ಸುಹಾಸ್ ಯಥಿರಾಜ್​ ಬೆಳ್ಳಿ ಪದಕ ಗೆದ್ದುಕೊಂಡ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ.

ಪ್ಯಾರಾಲಿಂಪಿಕ್​ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಯಥಿರಾಜ್ ಬೆಳ್ಳಿ ಪದಕ ಪಡೆದುಕೊಂಡಿದ್ದು, ಇಡೀ ದೇಶವೇ ಕೊಂಡಾಡುತ್ತಿದೆ. ಈ ನಡುವೆ ಶಿವಮೊಗ್ಗದ ವಿನೋಬಾ ನಗರ ನಿವಾಸಿಗಳು ಸಿಹಿಹಂಚಿ ಸಂಭ್ರಮಿಸಿದ್ದಾರೆ.

ಸುಹಾಸ್ ಯಥಿರಾಜ್ ವಿಜಯಕ್ಕೆ ಸಂಭ್ರಮಾಚರಣೆ

ಸುಹಾಸ್ ಯಥಿರಾಜ್ ಮೂಲತಃ ಹಾಸನದವರಾಗಿದ್ದು, ಅವರ ತಂದೆ ಇಂಜಿನಿಯರ್ ಆಗಿ ಶಿವಮೊಗ್ಗದಲ್ಲಿ ಕೆಲ ವರ್ಷಗಳ ಕಾಲ ನೆಲೆಸಿದ್ದರು. ಇಂದಿಗೂ ವಿನೋಬಾನಗರದಲ್ಲಿ ಸ್ವಂತ ಮನೆಯಿದ್ದು ಸುಹಾಸ್ ಅವರ ತಾಯಿ ಇಲ್ಲೇ ವಾಸವಿದ್ದಾರೆ. ಹಾಗಾಗಿ ಸುಹಾಸ್ ಜೊತೆ ಬೆಳೆದ ವಿನೋಬಾ ನಗರದ ನಿವಾಸಿಗಳು ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಓದಿ: ಪುತ್ತೂರು: ರೈಲ್ವೆ ಹಳಿಯ ಕ್ಲಿಪ್ ಕದಿಯುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್​

Last Updated : Sep 5, 2021, 2:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.