ಶಿವಮೊಗ್ಗ: ಅತ್ಯಾಚಾರ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಪರಿಣಾಮ ಪಿಎಸ್ಐ ಹಾಗೂ ಮುಖ್ಯ ಪೇದೆಯನ್ನು ಎಸ್ಪಿ ಅಮಾನತು ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸುರೇಶ್ ಎಂಬುವನನ್ನು ಬಂಧಿಸಿದ್ದರು. ಆರೋಪಿ ಸುರೇಶ್ ನನ್ನು ಪೊಲೀಸರು ಆರೋಗ್ಯ ತಪಾಸಣೆಗೆಂದು ಕರೆದುಕೊಂಡು ಹೋಗುವಾಗ ಆತ ಪರಾರಿಯಾಗಿದ್ದಾನೆ. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಶಾಂತರಾಜ್ ಮಾಳೂರು, ಪೊಲೀಸ್ ಠಾಣೆಯ ಪಿಎಸ್ಐ ಅಶ್ವಿನ್ ಕುಮಾರ್ ಹಾಗೂ ಮುಖ್ಯ ಪೇದೆ ಪ್ರಸನ್ನ ಕುಮಾರ್ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.