ಶಿವಮೊಗ್ಗ ನಗರದ ಕ್ರೀಡಾ ಹಾಸ್ಟೆಲ್ಗೆ ಸಚಿವ ಸಿ.ಟಿ.ರವಿ ಭೇಟಿ ನೀಡಿ ಮಕ್ಕಳ ಬೆಡ್ ಮೇಲೆ ಕುಳಿತು ಮಕ್ಕಳೊಂದಿಗೆ ಮಾತನಾಡಿದರು.
ನೆಹರೂ ಕ್ರೀಡಾಂಗಣದಲ್ಲಿರುವ ಕ್ರೀಡಾ ಹಾಸ್ಟೆಲ್ನಲ್ಲಿ ದಿನ ಚಿಕನ್,ಮೊಟ್ಟೆ, ಮಟನ್ ಕೊಡುತ್ತಾರೆಯೇ ಎಂದು ಮಕ್ಕಳನ್ನು ವಿಚಾರಿಸಿದ ಸಚಿವರು,ಹಾರ್ಡ್ವರ್ಕ್ ಮಾಡಿ ಮೆಡಲ್ ಗಳಿಸಿ ರಾಜ್ಯ, ದೇಶಕ್ಕೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಹಾರೈಸಿದರು.
ಮಕ್ಕಳಿಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪೋಷಕರು ಮನೆಯಲ್ಲಿದ್ದುಕೊಂಡು ನಂಬಿಕೆ ಮೇಲೆ ಹಾಸ್ಟೆಲ್ನಲ್ಲಿ ಮಕ್ಕಳಿಗೆ ಬಿಟ್ಟಿರುತ್ತಾರೆ. ಪೋಷಕರಿಗಿಂತ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಪ್ರೋಟಿನ್ ಬ್ಯಾಲೆನ್ಸ್ ಮಾಡಿ ಆಹಾರ ನೀಡಲು ಸಚಿವ ಸಿ.ಟಿ ರವಿ ಹಾಸ್ಟೆಲ್ ವಾರ್ಡನ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.