ETV Bharat / state

ಪೌರತ್ವ ಮಸೂದೆ ವಿರುದ್ಧ ಪ್ರತಿಭಟನೆ: ಮಾಜಿ ಶಾಸಕ ಪ್ರಸನ್ನ ಸೇರಿ ಹಲವರ ಬಂಧನ

ರಾಷ್ಟ್ರೀಯ ಪೌರತ್ವ ನೂಂದಣಿ ಹಾಗೂ ಪೌರತ್ವ ತಿದ್ದುಪಡಿಯನ್ನು ಖಂಡಿಸಿ ಶಿವಮೊಗ್ಗದ ಗಾಂಧಿ ಪಾರ್ಕ್ ಎದುರು ಪ್ರತಿಭಟನೆ ನಡೆಸುವಾಗ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

Shimoga Protest
ಪ್ರತಿಭಟನೆ
author img

By

Published : Dec 16, 2019, 6:28 PM IST

ಶಿವಮೊಗ್ಗ: ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ ತಿದ್ದುಪಡಿಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಸತ್ಯಾಗ್ರಹ ನಡೆಸುತ್ತಿದ್ದವರನ್ನು ಬಂಧಿಸಿದ ಪೊಲೀಸರು

ಶಿವಮೊಗ್ಗದ ಗಾಂಧಿ ಪಾರ್ಕ್ ಎದುರು ಪ್ರತಿಭಟನೆ ನಡೆಸುವಾಗ ಡಿವೈಎಸ್ಪಿ ಉಮೇಶ್ ನಾಯಕ್ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸುವವರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ರವರು ಇಂದು ಪೌರತ್ವ ಕಾಯಿದೆಯನ್ನು ವಿರೋಧಿಸಿ ಸತ್ಯಗ್ರಹ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರಿಗೆ ಅನುಮತಿ ಕೇಳಿದ್ದರೂ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ. ಆದಾಗ್ಯೂ ಪ್ರತಿಭಟನಾಕಾರರು ಗಾಂಧಿ ಪಾರ್ಕ್​ ಗೇಟಿನ ಮುಂಭಾಗವೇ ಗಾಂಧಿ ಭಜನೆಗಳನ್ನು ಹಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಸತ್ಯಾಗ್ರಹವನ್ನು ವಾಪಸ್ ಪಡೆಯುವಂತೆ ಹೇಳಿದರೂ, ಇದಕ್ಕೆ ಜಗ್ಗದೇ ಕಾಂಗ್ರೆಸ್ ಕಾರ್ಯಕರ್ತರು ಸತ್ಯಾಗ್ರಹ ಮುಂದುವರೆಸಿದಾಗ ಪೊಲೀಸರು ಸತ್ಯಾಗ್ರಹ ನಿರತರನ್ನು ಬಂಧಿಸಿ ಬಸ್​ನಲ್ಲಿ ಕರೆದು ಕೊಂಡು ಹೋದರು.

Intro:ರಾಷ್ಟ್ರೀಯ ಪೌರತ್ವ ನೂಂದಣಿ ಹಾಗೂ ಪೌರತ್ವ ತಿದ್ದುಪಡಿಯನ್ನು ಖಂಡಿಸಿ ಸತ್ಯಗ್ರಹ ನಡೆಸುತ್ತಿದ್ದ ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಗಾಂಧಿ ಪಾರ್ಕ್ ಎದುರು ಪ್ರತಿಭಟನೆ ನಡೆಸುವಾಗ ಡಿವೈಎಸ್ಪಿ ಉಮೇಶ್ ನಾಯಕ್ ನೇತೃತ್ವದಲ್ಲಿ ಸತ್ಯಗ್ರಹ ನಡೆಸುವವರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ರವರು ಇಂದು ಪೌರತ್ವ ಕಾಯಿದೆಯನ್ನು ವಿರೋಧಿಸಿ ಸತ್ಯಗ್ರಹ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರಿಗೆ ಅನುಮತಿ ಕೇಳಿದ್ರು ನೀಡಿರಲಿಲ್ಲ. ಇಂದು ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಒಂದು‌ ದಿನದ ಸತ್ಯಗ್ರಹ ನಡೆಸಬೇಕಿತ್ತು. ಆದ್ರೆ, ಅನುಮತಿ ಇಲ್ಲದ ಕಾರಣ ಗಾಂಧಿ ಪಾರ್ಕ್ ಮುಖ್ಯ‌ದ್ವಾರದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.

Body:ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪಾರ್ಕ್ ಗೇಟ್ ನ ಮುಂಭಾಗವೇ ಗಾಂಧಿ ಭಜನೆಗಳನ್ನು ಹಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಸತ್ಯಗ್ರಹವನ್ನು ವಾಪಸ್ ಪಡೆಯುವಂತೆ ಹೇಳಿದರು. ಇದಕ್ಕೆ ಜಗ್ಗದೆ ಕಾಂಗ್ರೆಸ್ ಕಾರ್ಯಕರ್ತರು ಸತ್ಯಗ್ರಹ ಮುಂದುವರೆಸಿದಾಗ ಪೊಲೀಸರು ಸತ್ಯಗ್ರಹ ನಿರತ ಎಲ್ಲಾರನ್ನು ಬಂಧಿಸಿ ಬಸ್ ನಲ್ಲಿ ಕರೆದು ಕೊಂಡು ಹೋದರು. ಸತ್ಯಗ್ರಹ ವೇಳೆ ಮೋದಿ ಹಠಾವ್ ದೇಶ್ ಬಚಾವ್ ಎಂದು ಘೋಷಣೆ ಕೂಗುತ್ತಿದ್ದರು.

Conclusion:ಪ್ರದಾನಿ ಮೋದಿಯಿಂದ ದೇಶ ಹಳಾಗಿ ಹೋಗ್ತಾ ಇದೆ. ದೇಶವನ್ನು ಧರ್ಮದ‌ ಆಧಾರದ ಮೇಲೆ ವಿಭಜನೆ ಮಾಡ್ತಾ ಇರೂದು ದೇಶದ್ರೋಹದ ಕೆಲ್ಸವಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಎಂಎಲ್ಸಿ ಆರ್. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗಡೆ‌, ಚೇತನ್, ಸೇರಿದಂತೆ ನೂರಕ್ಕೂ ಹೆಚ್ಚು ಸತ್ಯಗ್ರಹ ನಿರತವನ್ನು‌ ಬಂಧಿಸಲಾಗಿದೆ.

ಬೈಟ್: ಕೆ.ಬಿ.ಪ್ರಸನ್ನ ಕುಮಾರ್. ಮಾಜಿ ಶಾಸಕರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.