ಶಿವಮೊಗ್ಗ: ನಿವೇಶನ ನೀಡುವಂತೆ ಆಗ್ರಹಿಸಿ ಹಸೂಡಿ ಗ್ರಾಪಂ ವ್ಯಾಪ್ತಿಯ ಹಸೂಡಿ, ಚಿಕ್ಕಮರಡಿ, ವೀರಭದ್ರ ಕಾಲೋನಿ, ಅಮರಾವತಿ ಕ್ಯಾಂಪ್ ಮತ್ತು ಹೊಸೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಸೂಡಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ಐದು ಹಳ್ಳಿಗಳಿದ್ದು, 6000 ಜನರು ವಾಸಿಸುತ್ತಿದ್ದಾರೆ. ಇದರಲ್ಲಿ ಹಲವು ಕುಟುಂಬಗಳಿಗೆ ವಾಸಕ್ಕೆ ಮನೆಯಿಲ್ಲ ಹಾಗೂ ಮನೆ ಕಟ್ಟಲು ನಿವೇಶನವೂ ಇಲ್ಲ. ಈಗಾಗಲೇ ನಿವೇಶನ ಕೋರಿ ಗ್ರಾಪಂಗೆ ಅರ್ಜಿ ಹಾಕಿದ್ದಾರೆ. ಆದರೂ ಕೂಡ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಗ್ರಾಮ ಠಾಣಾ ಮತ್ತು ಸರ್ಕಾರಿ ಭೂಮಿಯಲ್ಲಿ ನಿವೇಶನಕ್ಕೆ ಜಾಗವಿದೆ. ಸರ್ಕಾರ ಇದನ್ನು ನಿವೇಶನಗಳನ್ನಾಗಿ ಪರಿವರ್ತಿಸಿ, ನಿವೇಶನ ರಹಿತರಿಗೆ ಹಂಚುವ ಮೂಲಕ ಬಡವರ ಸಹಾಯಕ್ಕೆ ಬರಬೇಕೆಂದು ಒತ್ತಾಯಿಸಿದರು.