ETV Bharat / state

ಬ್ರಾಹ್ಮಣ ಸಂಘದ ಸದಸ್ಯತ್ವ ರದ್ದು; ತಲೆ ಬೋಳಿಸಿಕೊಂಡು ಪ್ರತಿಭಟನೆ - etv bharat kannada

ತಾಲೂಕಿನ ಬಿ.ಹೆಚ್.ರಸ್ತೆಯ ಜಿಲ್ಲಾ ಬ್ರಾಹ್ಮಣ ಸಂಘದ ಮುಂಭಾಗ ನಂಜುಂಡ ಸ್ವಾಮಿ ಅವರು ತಮ್ಮ ಕೇಶಮುಂಡನ ಮಾಡಿಸಿಕೊಂಡು ಪ್ರತಿಭಟಿಸಿದರು.

Protest by shaving head
ಸದಸ್ಯತ್ವ ರದ್ದತಿ
author img

By

Published : Dec 23, 2022, 5:40 PM IST

ಬ್ರಾಹ್ಮಣ ಸಂಘದ ಸದಸ್ಯತ್ವ ರದ್ದು ಮಾಡಿದ್ದಕ್ಕೆ ಆಕ್ರೋಶ

ಶಿವಮೊಗ್ಗ: ಬ್ರಾಹ್ಮಣ ಸಂಘದಲ್ಲಿದ್ದ ತನ್ನ ಸದಸ್ಯತ್ವವನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಮ.ಸ.ನಂಜುಂಡ ಸ್ವಾಮಿ ಎಂಬವರು ತಲೆ ಬೋಳಿಸಿಕೊಂಡು ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ‌. ತಾಲೂಕಿನ ಬಿ.ಹೆಚ್.ರಸ್ತೆಯ ಜಿಲ್ಲಾ ಬ್ರಾಹ್ಮಣ ಸಂಘದ ಮುಂಭಾಗ ಇವರು ತಮ್ಮ ಕೇಶಮುಂಡನ ಮಾಡಿಸಿಕೊಂಡಿದ್ದಾರೆ.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನಟರಾಜ ಅವರು ತಮ್ಮನ್ನು ದುರುದ್ದೇಶದಿಂದಲೇ ಜಿಲ್ಲಾ ಸಂಘದ ಸದಸ್ಯತ್ವದಿಂದ ತೆಗೆದು ಹಾಕಿದ್ದಾರೆ. ಅವರಿಗೆ ಒಳ್ಳೆಯ ಬುದ್ಧಿ ಬರಲಿ ಎಂದೇ ಕೇಶಮುಂಡನ ಮಾಡಿಸಿಕೊಂಡಿದ್ದೇನೆ ಎಂದು ಅವರು ಕಿಡಿಕಾರಿದರು.

'ನಾನು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಎಕ್ಸ್- ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ.ಕಳೆದ ವರ್ಷ ಜಿಲ್ಲಾ ಬ್ರಾಹ್ಮಣ ಸಂಘದಿಂದ ನಡೆಸಲ್ಪಡುವ ಹಾಸ್ಟೆಲ್​ನಲ್ಲಿ ಊಟದ ಕುರಿತಾಗಿ ವಿದ್ಯಾರ್ಥಿಯೊಬ್ಬ ನನಗೆ ದೂರು ನೀಡಿದ್ದ. ಈ ಬಗ್ಗೆ ನಾನು ಅಧ್ಯಕ್ಷರಾದ ನಟರಾಜ ಅವರ ಗಮನಕ್ಕೆ ತರಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ.

ಈ ಕಾರಣಕ್ಕಾಗಿ ನಾನು ಆತ ಕಳುಹಿಸಿದ ವಿಡಿಯೋವನ್ನು ವಾಟ್ಸಾಪ್​ ಗ್ರೂಪ್​ನಲ್ಲಿ ಹಂಚಿಕೊಂಡೆ. ಇದನ್ನೇ ದೊಡ್ಡ ವಿಷಯವೆಂದು ಪರಿಗಣಿಸಿ ನನ್ನನ್ನು ಟಾರ್ಗೆಟ್​ ಮಾಡಿ ಸದಸ್ಯತ್ವದಿಂದ ವಜಾ ಮಾಡಿದ್ದಾರೆ. ಈ ರೀತಿ ನಡೆದುಕೊಳ್ಳುವುದು ನಿಜಕ್ಕೂ ಸರಿಯಲ್ಲ. ನನ್ನ ಸದಸ್ಯತ್ವವನ್ನು ಮರಳಿ ನನಗೆ ನೀಡಬೇಕು' ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮೇಕಪ್​ಗೆ ಹಣ ನೀಡಿಲ್ಲವೆಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಮಹಿಳೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.