ETV Bharat / state

'ನಮ್ಮೂರಿಗೆ ಅಕೇಶಿಯ ಮರ ಬೇಡ' ಹೋರಾಟ ಒಕ್ಕೂಟದಿಂದ ಪ್ರತಿಭಟನೆ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಪಶ್ಚಿಮ ಘಟ್ಟದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಸುಮಾರು 33 ಸಾವಿರ ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಅವಧಿಗೆ ಲೀಸ್​ಗೆ ನೀಡಲಾಗಿತ್ತು. ಆದರೆ, ಈಗ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿದೆ. ಜೊತೆಗೆ ಲೀಸ್ ಅವಧಿ ಕೂಡ ಮುಗಿದಿದೆ. ಹಾಗಾಗಿ ಸರ್ಕಾರ 33 ಸಾವಿರ ಹೆಕ್ಟೇರ್ ಭೂಮಿಯನ್ನು ಕಬಳಿಸಲು ಪ್ರಯತ್ತಿಸುತ್ತಿದೆ ಎಂದು ಆರೋಪಿಸಿದರು.

protest at shimogga from nammurige akeshiya mara beda group
'ನಮ್ಮೂರಿಗೆ ಅಕೇಶಿಯ ಮರ ಬೇಡ' ಹೋರಾಟ ಒಕ್ಕೂಟ ವತಿಯಿಂದ ಪ್ರತಿಭಟನೆ
author img

By

Published : Jan 8, 2021, 8:17 AM IST

Updated : Jan 8, 2021, 8:50 AM IST

ಶಿವಮೊಗ್ಗ: ಎಂಪಿಎಂಗೆ ಲೀಸ್ ನೀಡಿದ್ದ 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಈ ಕೂಡಲೇ ವಾಪಸ್​​ ಪಡೆದು ಅರಣ್ಯ ಇಲಾಖೆಗೆ ನೀಡುವಂತೆ ಆಗ್ರಹಿಸಿ 'ನಮ್ಮೂರಿಗೆ ಅಕೇಶಿಯ ಮರ ಬೇಡ' ಹೋರಾಟ ಒಕ್ಕೂಟ ವತಿಯಿಂದ ನಗರದ ಬೆಕ್ಕಿನ ಕಲ್ಮಠದಿಂದ ಸಿಸಿಎಫ್ ಕಚೇರಿವರೆಗೂ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಾಯಿತು.

'ನಮ್ಮೂರಿಗೆ ಅಕೇಶಿಯ ಮರ ಬೇಡ' ಹೋರಾಟ ಒಕ್ಕೂಟದಿಂದ ಪ್ರತಿಭಟನೆ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಪಶ್ಚಿಮ ಘಟ್ಟದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಸುಮಾರು 33 ಸಾವಿರ ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಅವಧಿಗೆ ಲೀಸ್​ಗೆ ನೀಡಲಾಗಿತ್ತು. ಆದರೆ ಈಗ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿದೆ. ಜೊತೆಗೆ ಲೀಸ್ ಅವಧಿ ಕೂಡ ಮುಗಿದಿದೆ. ಹಾಗಾಗಿ ಸರ್ಕಾರ 33 ಸಾವಿರ ಹೆಕ್ಟೇರ್ ಭೂಮಿಯನ್ನು ಕಬಳಿಸಲು ಪ್ರಯತ್ತಿಸುತ್ತಿದೆ ಎಂದು ಆರೋಪಿಸಿದರು. ಹಾಗೂ ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿ, ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಲೀಸ್​​ಗೆ ನೀಡುವ ಮೂಲಕ ಅಕೇಶಿಯ ಮರಗಳನ್ನು ಬೆಳೆಸಲು ಮುಂದಾಗಿದೆ.

ಈ ಸುದ್ದಿಯನ್ನೂ ಓದಿ: ಅಂಗನವಾಡಿ ಕೇಂದ್ರಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಇದರಿಂದ ಮಲೆನಾಡು ಬಯಲು ಸೀಮೆ ಆಗಲಿದೆ. ಹಾಗಾಗಿ ಸರ್ಕಾರ 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ ಅರಣ್ಯವನ್ನು ಬೆಳೆಸಬೇಕು. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡಬಾರದು ಎಂದು ಆಗ್ರಹಿಸಿ ಬಹೃತ್ ಪ್ರತಿಭಟನೆ ನಡೆಸಿದರು.

ಸಿಸಿಎಫ್ ಕಚೇರಿ ಆವರಣದ ಒಳಗಡೆ ಪ್ರತಿಭಟನಾಕಾರರನ್ನು ಬಿಡದ ಹಿನ್ನೆಲೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ಸಹ ನಡೆಯಿತು.

Last Updated : Jan 8, 2021, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.