ಶಿವಮೊಗ್ಗ : ನಗರದ ಹೊರ ವಲಯದ ಕೇಂದ್ರ ಕಾರಾಗೃಹದಲ್ಲಿ ಬಂಧಿಗಳು ಜೈಲು ಸಿಬ್ಬಂದಿ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಿಂದಾಗಿ ಬೆಳಗ್ಗೆಯಿಂದ ಯಾರು ಉಪಹಾರ ಹಾಗೂ ಊಟ ಮಾಡಿಲ್ಲ ಎಂದು ತಿಳಿದು ಬಂದಿದೆ.
ಪ್ರತಿಭಟನೆಗೆ ಕಾರಣ
ಕಾರಾಗೃಹದಲ್ಲಿ ವಾರಕ್ಕೂಮ್ಮೆ ತಲಾಷ್ ನಡೆಸುವುದು ಸಾಮಾನ್ಯವಾಗಿದೆ. ಹೀಗೆ ತಲಾಷ್ ನಡೆಸುವಾಗ ಜೈಲಿನ ಸೆಕ್ಯುರಿಟಿರವರು ಹಲ್ಲೆ ನಡೆಸಿದ್ದಾರೆ. ಮೊಬೈಲ್ ಹಾಗೂ ಗಾಂಜಾ ಸೇರಿದಂತೆ ಇತರೆ ವಸ್ತುಗಳ ಸಂಗ್ರಹದ ಕುರಿತು ಹುಡುಕಾಟ ನಡೆಸಲಾಗುತ್ತಿದೆ.
ಹೀಗೆ ಹುಡುಕಾಟ ನಡೆಸುವಾಗ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯವಾದ್ರೂ ಸಹ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸದೆ ಜೈಲಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಯಾರ ಬಳಿ ಮೊಬೈಲ್ ಸಿಗುತ್ತದೆಯೋ ಅವರಿಗೆ ಹಲ್ಲೆ ನಡೆಸುವುದನ್ನು ಬಿಟ್ಟು ಸಾಮಾನ್ಯ ಬಂಧಿಗಳಿಗೂ ಸಹ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆಗೆ ಬಚ್ಚಾ ಕಾರಣವಾದ್ನಾ?
ಇಂದು ಬೆಳಗ್ಗೆಯಿಂದ ಜೈಲಿನಲ್ಲಿ ಏಕಾಏಕಿ ಪ್ರತಿಭಟನೆ ನಡೆಸಲಾಗುತ್ತಿರುವುದು ರೌಡಿಶೀಟರ್ ಬಚ್ಚಾನಿಂದಾಗಿ ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಬಚ್ಚಾ ಜೈಲಿನಲ್ಲಿ ಒಂದಲ್ಲಾ ಒಂದು ಗಲಾಟೆ ನಡೆಸುತ್ತಿದ್ದಾನೆ.
ಇನ್ನೂ ಈತ ಜೈಲಿನ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೂ ಸಹ ಆರೋಪ ಮಾಡಿ, ವಿಡಿಯೋ ಮಾಡಿ ಹರಿಬಿಡುತ್ತಿದ್ದ. ಈತ ಮೊಬೈಲ್ ಹೊಂದಿದ್ದ ವಿಚಾರಣೆಯ ವೇಳೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ.
ಕಳೆದ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಜೈಲಿಗೆ ಹೋಗಿದ್ದ. ಈತನಿಗೆ ಜೈಲಿನಲ್ಲಿ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಈಗ ಆತನೇ ಈ ಪ್ರತಿಭಟನೆ ನಡೆಸಲು ಕಾರಣವಾಗಿದ್ದಾನೆ ಎನ್ನಲಾಗಿದೆ. ಪ್ರತಿಭಟನೆ ಅಂತ್ಯಗೊಳಿಸಲು ಜೈಲು ಸಿಬ್ಬಂದಿ ಮನವೊಲಿಸಲು ಯತ್ನ ಮಾಡ್ತಾ ಇದ್ದಾರೆ.
ಓದಿ: ಪಂಚಮಸಾಲಿ ಪೀಠದ 3ನೇ ಪೀಠಕ್ಕೆ ನೂತನ ಪೀಠಾಧಿಪತಿ.. ಬಬಲೇಶ್ವರದ ಡಾ.ಮಹದೇವ ಶಿವಾಚಾರ್ಯ ಶ್ರೀಗೆ ಪಟ್ಟಾಭಿಷೇಕ..