ETV Bharat / state

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಶ್ನಿಸಿ ಪ್ರತಿಭಟನೆ - ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಂದೂಡಿಕೆ

ಶಿವಮೊಗ್ಗ ಜಿಲ್ಲೆಯ ಕಡೇಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಿಕೆ ಮಾಡಿರುವುದನ್ನು ಖಂಡಿಸಿ ಕಡೇಕಲ್ ಗ್ರಾಮದವರು ಜಿಲ್ಲಾ ಸಹಕಾರ ಸಂಘದ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

postponement-of-election
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಶ್ನಿಸಿ ಪ್ರತಿಭಟನೆ
author img

By

Published : Jan 13, 2020, 5:42 PM IST

ಶಿವಮೊಗ್ಗ: ಇಲ್ಲಿನ ಕಡೇಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಮುಂದೂಡಿಕೆ ಮಾಡಿರುವುದನ್ನು ಖಂಡಿಸಿ ಕಡೇಕಲ್ ಗ್ರಾಮದವರು ಜಿಲ್ಲಾ ಸಹಕಾರ ಸಂಘದ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜನವರಿ 12ಕ್ಕೆ ಚುನಾವಣೆಯ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸಲು ದಿನಾಂಕ ಸಹ ಘೋಷಣೆ ಮಾಡಲಾಗಿತ್ತು, ಆದರೆ ಕೆಲ ಪಟ್ಟಬದ್ದ ಹಿತಾಸಕ್ತಿಯ ಕುಮ್ಮಕ್ಕಿಗೆ ಮಣಿದು ಅಕ್ರಮವಾಗಿ ಚುನಾವಣೆಯನ್ನು ಮುಂದೂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಘೋಷಣೆ ಕೋಗಿ ಆಕ್ರೋಶ ಹೊರ ಹಾಕಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಶ್ನಿಸಿ ಪ್ರತಿಭಟನೆ

ಈ ಕುರಿತಂತೆ ಮಾತನಾಡಿದ ಕಾಂಗ್ರೆಸ್​ ಮುಖಂಡ ರಮೇಶ್ ಹೆಗಡೆ, ಜಾತಂತ್ರ ವ್ಯವಸ್ಥೆಯಲ್ಲಿ ಅಕ್ರಮ ನಡೆಸಿ ಚುನಾವಣೆಯನ್ನು ಮುಂದೂಡಿರುವುದು ಖಂಡನೀಯ ತಕ್ಷಣ ಜಿಲ್ಲಾ ಸಹಕಾರ ಸಂಘದ ನಿಂಬಂಧಕರು ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಬೇಕು ಎಂದರು.

ಈ ಕುರಿತಂತೆ ಸಹಕಾರ ಇಲಾಖೆಯ ಅಧಿಕಾರಿಗಳಿಗ ಮನವಿ ಪತ್ರ ಸಲ್ಲಿಸಿದರು.

Intro:ಶಿವಮೊಗ್ಗ ತಾಲೂಕು ಕಡೇಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ವಿನಾ ಕಾರಣ ಮುಂದೂಡಿಕೆ ಮಾಡಿರುವುದನ್ನು ಖಂಡಿಸಿ ಕಡೇಕಲ್ ಗ್ರಾಮದವರು ಜಿಲ್ಲಾ ಸಹಕಾರ ಸಂಘದ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಿನ್ನೆ (ಜನವರಿ 12 ಕ್ಕೆ) ಚುನಾವಣೆಯ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸಲು ದಿನಾಂಕ ಸಹ ಘೋಷಣೆ ಮಾಡಲಾಗಿತ್ತು.ಆದ್ರೆ, ಕೆಲ ಪಟ್ಟಬದ್ದ ಹಿತಾಸಕ್ತಿಯ ಕುಮ್ಮಕ್ಕಿಗೆ ಮಣಿದು ಅಕ್ರಮವಾಗಿ ಚುನಾವಣೆಯನ್ನು ಮುಂದೂಡಲಾಗಿದೆ.

Body:ಚುನಾವಣೆ ನಡೆಸುವಂತೆ ಚುನಾವಣಾಧಿಕಾರಿ‌ ಸೂಕ್ತ ಆದೇಶ ನೀಡಿದ್ದರು ಸಹ ಚುನಾವಣೆ ನಡೆಸಲು ಸಹಕಾರ ಇಲಾಖೆ
ಚುನಾವಣೆ ನಡೆಸಲು ಸೂಕ್ತ ತಯಾರಿ ನಡೆಸದೆ ಸಕಾರಣ ನೀಡದೆ ಚುನಾವಣೆ ಮುಂದೂಡಿಕೆ ಮಾಡಿದೆ. ಅಲ್ಲದೆ, ಚುನಾವಣೆಗೆ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲು ಆಗದ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ ಎಂಬ ಕಾರಣ ನೀಡಿ ಚುನಾವಣೆಯನ್ನು ಮುಂದೂಡಲಾಗಿದೆ. ಇದು ಈ ಭಾಗದ ಬಿಜೆಪಿಯವರ ಕುತಂತ್ರದಿಂದ ಚುನಾವಣೆಯನ್ನು ಸಹಕಾರ ಇಲಾಖೆಯವರು ಮುಂದೂಡಿದ್ದಾರೆ.

Conclusion:ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಕ್ರಮ ನಡೆಸಿ ಚುನಾವಣೆಯನ್ನು ಮುಂದೂಡಿರುವುದು ಖಂಡನೀಯ ತಕ್ಷಣ ಜಿಲ್ಲಾ ಸಹಕಾರ ಸಂಘದ ನಿಂಬಂಧಕರು ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿ ನ್ಯಾಯ ಸಮ್ಮತವಾದ ಚುನಾವಣೆ ನಡೆಸಲು ಆಗ್ರಹಿಸಿ ಸಹಕಾರ ಇಲಾಖೆಯ ಅಧಿಕಾರಿಗಳಿಗ ಮನವಿಯನ್ನು ಸಲ್ಲಿಸಲಾಯಿತು. ಕಡೇಕಲ್ ಗ್ರಾಮಸ್ಥರು ವಿರೇಶ್, ಜಯಣ್ಣ, ಗೋಪಾಲ, ರಾಜಪ್ಪ, ಮಂಜುನಾಥ್, ಮಧು, ಚೇತನ್ ಹಾಗೂ ಗಿರೀಶ್ ರವರು ಕಾಂಗ್ರೆಸ್ ಮುಖಂಡ ರಮೇಶ್ ಹೆಗಡೆ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಬೈಟ್: ರಮೇಶ್ ಹೆಗಡೆ. ಕಾಂಗ್ರೆಸ್ ಮುಖಂಡರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.