ETV Bharat / state

ಶಿವಮೊಗ್ಗ: ಶರಾವತಿ ಉಳಿವಿಗಾಗಿ ಪೋಸ್ಟ್ ಕಾರ್ಡ್​ ಚಳವಳಿ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರವನ್ನು ಖಂಡಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಪೋಸ್ಟ್ ಕಾರ್ಡ್​ ಚಳವಳಿ ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.

author img

By

Published : Jul 2, 2019, 2:42 PM IST

ಶರಾವತಿ ಉಳಿವಿಗಾಗಿ ಪೋಸ್ಟ್ ಕಾರ್ಡ ಚಳುವಳಿ

ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರವನ್ನು ಖಂಡಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಪೋಸ್ಟ್ ಕಾರ್ಡ್​ ಚಳವಳಿ ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.

ಶರಾವತಿ ಉಳಿವಿಗಾಗಿ ಪೋಸ್ಟ್ ಕಾರ್ಡ ಚಳುವಳಿ

ಲಿಂಗನಮಕ್ಕಿ ಜಲಾಶಯದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಲು ಹುನ್ನಾರ ನಡೆಸುತ್ತಿರುವುದು ಸಂಪೂರ್ಣ ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಆರೋಪಿಸಿ ಮುಖ್ಯಮಂತ್ರಿಗಳಿಗೆ ಪೋಸ್ಟ್​ ಕಾರ್ಡ್​ ಬರೆಯಲಾಯಿತು. ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅಲ್ಲಿಯ ಕೆರೆಗಳ ಅಭಿವೃದ್ಧಿ ಹಾಗೂ ಮಳೆಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸಿದರೆ ನೀರಿನ ಸಮಸ್ಯೆ ಬಗೆಹರಿಯುವುದೆಂಬ ಸಾಮಾನ್ಯ ಪ್ರಜ್ಞೆ ಸರ್ಕಾರಕ್ಕೆ ಇರಬೇಕಾಗುತ್ತದೆ. ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿರುವ ಶರಾವತಿ ನದಿಯನ್ನು ತಾವು ಬತ್ತಿಸಲು ಹೊರಟರೆ ಸಂಪೂರ್ಣ ರಾಜ್ಯ ಕತ್ತಲಲ್ಲಿ ಮುಳುಗುವುದು ಮಾತ್ರವಲ್ಲ ನೀರಿನ ಹಾಹಾಕಾರದಿಂದ ಮಲೆನಾಡು ಸರ್ವನಾಶ ಖಂಡಿತ. ಹಾಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡದೆ ಅವೈಜ್ಞಾನಿಕ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Intro:ಶಿವಮೊಗ್ಗ,
ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ದಾರವನ್ನ ಖಂಡಿಸಿ ಜಿಲ್ಲಾದ್ಯಂತ ಪ್ರತಿಭಟನೆ ಗಳು ದಿನದಿಂದ ದಿನಕ್ಕೆ ಪ್ರತಿಭಟನೆ ಗಳು ತೀವ್ರ ಸ್ವರೂಪ ಪಡೆದುಕೋಳ್ಳುತ್ತಿವೆ, ಅದರಂತೆ ಇಂದು ಸಹ ಅಣ್ಣಾ ಹಜಾರೆ ಹೋರಾಟ. ಸಮಿತಿ ವತಿಯಿಂದ ಪೋಸ್ಟ್ ಕಾರ್ಡ ಚಳುವಳಿ ಹಮ್ಮಿಕೊಳ್ಳುವ ಮೂಲಕ ವಿಭಿನ್ನ ವಾಗಿ ಪ್ರತಿಭಟಿಸಲಾಯಿತು.

Body:ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ ಪತ್ರದಲ್ಲಿ
ಗೌರವಾನ್ವಿತ ಮುಖ್ಯಮಂತ್ರಿಗಳೇ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಲಿಂಗನಮಕ್ಕಿ ಜಲಾಶಯದ ಶರಾವತಿ ನದಿ ನೀರನ್ನು ಬೆಂಗಳೂರಿ ಹರಿಸಲು ಹುನ್ನಾರ ನಡೆಸುತ್ತಿರುವುದು ಸಂಪೂರ್ಣ ಅವೈಜ್ಞಾನಿಕ ವಾಗಿರುತ್ತದೆ. ಇದನ್ನ ನಮ್ಮ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅಲ್ಲಿಯ ಕೆರೆಗಳ ಅಭಿವೃದ್ಧಿ ಹಾಗೂ ಮಳೆಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸಿದರೆ ನೀರಿನ ಸಮಸ್ಯೆ ಬಗೆಹರಿಯುವುದೆಂಬ ಕಿಂಚಿತ್
ಸಾಮಾನ್ಯ ಪ್ರಜ್ಞೆ ಸರ್ಕಾರಕ್ಕೆ ಇರಬೇಕಾಗುತ್ತದೆ.

ಇಡೀ ರಾಜ್ಯಕ್ಕೆ ಬೆಳಕು ನೀಡುತ್ತಿರುವ ಶರಾವತಿ ನದಿಯನ್ನು ತಾವು ಬತ್ತಿಸಲು ಹೊರಟರೆ ಸಂಪೂರ್ಣ ರಾಜ್ಯ ಕತ್ತಲಲ್ಲಿ ಮುಳುಗುವುದು ಮಾತ್ರವಲ್ಲ ನೀರಿನ ಆಹಾಕಾರ ದಿಂದ ಮಲೆನಾಡಿನ ಸರ್ವನಾಶ ಖಂಡಿತ. ಹಾಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರ ತೆರಿಗೆ ಹಣ ದುಂದುವೆಚ್ಚ ಮಾಡದೆ ಅವೈಜ್ಞಾನಿಕ ಯೋಜನೆಯನ್ನು ತಕ್ಷಣ ನಿಲ್ಲಿಸುವುದರ ಮೂಲಕ ಶಿವಮೊಗ್ಗ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನೀರಿನ ಬವಣೆ ನಿಲ್ಲಿಸುವ ಮೂಲಕ ಶಿವಮೊಗ್ಗ ಜಿಲ್ಲೆಯ ಜನತೆಗೆ ನ್ಯಾಯ ದೊರಕಿಸಿಕೊಡಬೇಂಬ ಒತ್ತಾಯವನ್ನು ಮಾಡುತ್ತಿದ್ದೆವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಪತ್ರಗಳನ್ನು ಸಾರ್ವಜನಿಕರಿಂದ ಮುಖ್ಯಮಂತ್ರಿ ಗಳಿಗೆ ಕಳಿಸಿ ಕೊಡಲಾಗುತ್ತದೆ ಎನ್ನುತ್ತಾರೆ ಹೋರಾಟ ಸಮಿತಿಯ ಸದಸ್ಯ ರು

Conclusion:ಒಟ್ಟಾರೆ ಯಾಗಿ ಮಲೆನಾಡಿನ ಜೀವ ನದಿಯ ಶರಾವತಿ ನೀರನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರ ಕೈ ಬಿಟ್ಟು ಇಡಿ ರಾಜ್ಯ ಕ್ಕೆ ಬೆಳಕು ಕೊಟ್ಟ ಶರಾವತಿ ನದಿಯನ್ನ ಉಳಿಸಿಕೋಡಿ ಎನ್ನುವುದೆ ಮಲೆನಾಡಿನ ಜನರ ಕೂಗಾಗಿದೆ.
ಬೈಟ್- ಡಾ.ಚಿಕ್ಕಸ್ವಾಮಿ ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಧ್ಯಕ್ಷರು
ಬೈಟ್- ಟಿ.ಎಂ ಅಶೋಕ ಯಾದವ್ ಅಣ್ಣಾ ಹಜಾರೆ ಸಮಿತಿ ಪ್ರಧಾನ ಕಾರ್ಯದರ್ಶಿ
ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.