ETV Bharat / state

ಶಿವಮೊಗ್ಗದಲ್ಲಿ ಸೌಂಡ್​ ಕಿರಿ ಕಿರಿಗೆ ಬ್ರೇಕ್​.. ಸೈಲೆನ್ಸರ್​ಗಳ ಮೇಲೆ ರೋಡ್​ ರೋಲರ್​ ಸವಾರಿ

ಸೌಂಡ್​ ಕಿರಿ ಕಿರಿಗೆ ಬ್ರೇಕ್​- ಶಿವಮೊಗ್ಗದಲ್ಲಿ ಪೊಲೀಸರಿಂದ ಸ್ಟಾಪ್ ನಾಯ್ಸ್ ಅಭಿಯಾನ - 70ಕ್ಕೂ ಹೆಚ್ಚು ಸೈಲೆನ್ಸರ್​ ಹಾಗೂ ಕರ್ಕಶ ಹಾರ್ನ್​ಗಳ ಮೇಲೆ ರೋಲರ್​​ ಸವಾರಿ

police-destroyed-bike-silencer-and-hornes-in-shivamogga
ಶಿವಮೊಗ್ಗ: ಸ್ಟಾಪ್ ನಾಯ್ಸ್ ಅಭಿಯಾನದಲ್ಲಿ 70 ಸೈಲೆನ್ಸರ್ ನಾಶ
author img

By

Published : Dec 24, 2022, 3:31 PM IST

ಶಿವಮೊಗ್ಗ: ಸ್ಟಾಪ್ ನಾಯ್ಸ್ ಅಭಿಯಾನದಲ್ಲಿ 70 ಸೈಲೆನ್ಸರ್ ನಾಶ

ಶಿವಮೊಗ್ಗ: ಜಿಲ್ಲೆಯಲ್ಲಿ ಪೊಲೀಸರು ಸ್ಟಾಪ್ ನಾಯ್ಸ್ ಅಭಿಯಾನ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ 70 ಸೈಲೆನ್ಸರ್ ಪೈಪ್​ಗಳು ಹಾಗೂ 40 ಕರ್ಕಶ ಹಾರ್ನ್ ಗಳನ್ನು ನಾಶಪಡಿಸಿದ್ದಾರೆ. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ರೋಡ್​​ ರೋಲರ್​ ಮೂಲಕ ಸೈಲೆನ್ಸರ್ ಪೈಪ್ ಗಳನ್ನು ಹಾಗೂ ಹಾರ್ನ್ ಗಳನ್ನು ನಾಶಪಡಿಸಲಾಯಿತು.

ಎಸ್.ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸ್ಟಾಪ್ ನಾಯ್ಸ್ ಅಭಿಯಾನ ಆರಂಭಿಸಲಾಗಿದ್ದು, ಕರ್ಕಶ ಶಬ್ದ ಮಾಡಿಕೊಂಡು ಸಂಚರಿಸುತ್ತಿದ್ದ ಹಲವು ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಸುಮಾರು 1 ತಿಂಗಳಿನಿಂದ ನಡೆಸಲಾಗಿದ್ದ ಅಭಿಯಾನದಲ್ಲಿ ಟ್ರಾಫಿಕ್ ಪೊಲೀಸರು ಹಲವು ವಾಹನಗಳ ಸವಾರರಿಂದ ವಿವಿಧ ಸೈಲೆನ್ಸರ್ ಮತ್ತು ಹಾರ್ನ್​ಗಳನ್ನು ವಶಪಡಿಸಿಕೊಂಡಿದ್ದರು. ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಎಸ್.ಪಿ. ಮಿಥುನ್ ಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.

ಇನ್ನು, ಕರ್ಕಶ ಹಾರ್ನ್ ಗಳು, ಸೈಲೆನ್ಸರ್ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ. ಇದರಿಂದಾಗಿ ಸಾರ್ವಜನಿಕವಾಗಿ ಸೈಲೆನ್ಸರ್ ಹಾಗೂ ಹಾರ್ನ್ ಗಳನ್ನು ನಾಶಪಡಿಸಲಾಗಿದೆ.

ಇದನ್ನೂ ಓದಿ : ರೋಡ್​ ರೋಲರ್​ ಹತ್ತಿಸಿ ಕರ್ಕಶ ಸದ್ದು ಮಾಡುವ 631 ಸೈಲೆನ್ಸರ್​ ನಾಶ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.