ಶಿವಮೊಗ್ಗ: ಆನೆ ದಂತಗಳ ಅಕ್ರಮ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಜಾಗೃತ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಹೊನ್ನಾವರದ ಮುಜಾಫರ್, ಕುಮಟಾದ ಮೊಹಮ್ಮದ್ ಡ್ಯಾನಿಶ್ ಹಾಗೂ ಸೊರಬದ ಜಹೀರ್ ಎಂಬುವವರು ಬಂಧಿತ ಆಪಾದಿತರು. ಬಂಧಿತರಿಂದ 9 ದಂತ ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ಸೊರಬದಲ್ಲಿ ನಿರಾನೆ ದಂತಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಜಾಗೃತಿ ದಳದ ಎಸಿಎಫ್ ಬಾಲಚಂದ್ರ ಹಾಗೂ ಡಿಆರ್ ಎಫ್ ಓ ರೇವಣ್ಣ ಸಿದ್ದಯ್ಯ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ ಸೊರಬದಲ್ಲಿ ಇದೇ ರೀತಿಯ ದಂತ ಸಾಗಾಣೆ ನಡೆದಿತ್ತು. ಈ ಭಾರಿ ಆರೋಪಿಗಳನ್ನು ದಂತ ಸಮೇತ ಸಿಕ್ಕಿ ಬಿದ್ದಿದ್ದಾರೆ.