ಶಿವಮೊಗ್ಗ : ಜನ ಸಾರ್ವಜನಿಕ ಸ್ಥಳಗಳಿಗೆ ಬರುವಾಗ ಮಾಸ್ಕ್ ಧರಿಸುವ ಬಗ್ಗೆ ಇನ್ನೂ ಅಸಡ್ಡೆ ತೋರುತ್ತಿರುವುದರಿಂದ ದಿನೇದಿನೆ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ 2ನೇ ಅಲೆಯಿಂದಾಗಿ ಈಗ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ಡೌನ್ಗೆ ಸರ್ಕಾರ ಆದೇಶಿಸಿದೆ.
ಇಷ್ಟಾದರೂ ಜನ ಇನ್ನೂ ಸಹ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರುವುದರಿಂದ ಕೊರೊನಾ ಈಗ ಮತ್ತೆ ಹೆಚ್ಚಾಗಿದೆ. ಈ ಹಿನ್ನೆಲೆ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮಾಸ್ಕ್ ಅಭಿಯಾನ ನಡೆಸಿತು.
ನಗರದ ಶಿವಪ್ಪ ನಾಯಕ ವೃತ್ತ ಹಾಗೂ ಗಾಂಧಿ ಬಜಾರ್ನಲ್ಲಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಲಾಯಿತು. ಮಹಾನಗರ ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ ವಟಾರೆ ಹಾಗೂ ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ಮುನ್ನೂಳ್ಳಿ ಮಾಸ್ಕ್ ಧರಿಸುವ ಕುರಿತು ಅಭಿಯಾನ ನಡೆಸಿದರು. ರಸ್ತೆಯಲ್ಲಿ ಮಾಸ್ಕ್ ಧರಿಸದೆ ಇರುವವರಿಗೆ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಿದರು.
ಮಾಸ್ಕ್ ಇಲ್ಲದೆ ಇರುವವರಿಗೆ ಮಾಸ್ಕ್ ನೀಡಿ ಜಾಗೃತಿ ಅಭಿಯಾನ : ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಬೇಕು ಎಂದು ಅರಿವು ಮೂಡಿಸುವ ಜೊತೆಗೆ ಮಾಸ್ಕ್ ಇಲ್ಲದೆ ಬಂದವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಲಾಯಿತು. ಮೇಯರ್ ಸುನೀತಾ ಅಣ್ಣಪ್ಪನವರು ಮಾಸ್ಕ್ ಇಲ್ಲದೆ ಇರುವವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದರು.
ಉಪಮೇಯರ್ ಶಂಕರ ಗನ್ನಿ ಕೂಡ ನಗರ ಸಾರಿಗೆ ಬಸ್ಗಳನ್ನು ಏರಿ ಮಾಸ್ಕ್ ಹಾಕಿಸಿದ್ರು. ಬಾಯಿ ಹಾಗೂ ಮೂಗು ಮುಚ್ಚದೆ ಇರುವವರಿಗೆ ಸರಿಯಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳಿದರು. ನಂತರ ಕೆಲವರಿಗೆ ಮಾಸ್ಕ್ ನೀಡಿದರು.
ಪೊಲೀಸ್ ಇಲಾಖೆಯವರು ಮಾಸ್ಕ್ ಇಲ್ಲದೆ ರಸ್ತೆಗಿಳಿದವರಿಗೆ ಹಾಗೂ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿದರು. ಬೈಕ್ ಸವಾರರು ಮಾಸ್ಕ್ ಇಲ್ಲದೆ ಬರುವವರನ್ನು ತಡೆದು ದಂಡ ವಿಧಿಸಿ, ರಶೀದಿ ನೀಡಿ ಹಣ ಪಡೆಯುತ್ತಿದ್ದರು. ಕೆಲವರು ಮಾಸ್ಕ್‌ನ ಬೈಕ್‌ನೊಳಗೆ ಇಟ್ಟ ಕಾರಣ ಪೊಲೀಸರಿಗೆ ದಂಡ ಕಟ್ಟಿದರು.
ಈಗಾಗಲೇ ಕೊರೊನಾ ಹೆಚ್ಚಾಗುತ್ತಿದೆ. ಇದರಿಂದ ಮನೆಯಿಂದ ಅನಾವಶ್ಯಕವಾಗಿ ಹೊರ ಬಾರದೆ, ರೋಗದಿಂದ ದೂರವಿರಿ ಎಂದು ಮೇಯರ್ ಹಾಗೂ ಆಯುಕ್ತರು ಮನವಿ ಮಾಡಿಕೊಂಡರು.