ಶಿವಮೊಗ್ಗ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಸಂಡೇ ಲಾಕ್ ಡೌನ್ನ್ನು ಘೋಷಣೆ ಮಾಡಿದೆ. ಹಾಗಾಗಿ ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಇದರ ಮಧ್ಯೆ ನಗರದ ಲಷ್ಕರ್ ಮೊಹಲ್ಲಾದ ಮೀನಿನ ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಇಲ್ಲದೇ ಹಾಗೂ ಸಂಡೇ ಲಾಕ್ ಡೌನ್ ಅನ್ನು ಲೇಕ್ಕಿಸದೇ ಮೀನು ಖರೀದಿಗೆ ಮುಗಿಬಿದ್ದಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ ಅಂಗಡಿಗಳನ್ನು ಬಂದ್ ಮಾಡಿಸಿದರು.