ETV Bharat / state

ಶಿವಮೊಗ್ಗ: ಮದುವೆ ಸಮಾರಂಭದಲ್ಲಿ ಊಟ ಮಾಡಿದ್ದ ಹಲವರಿಗೆ ವಾಂತಿ, ಭೇದಿ - ಶಿವಮೊಗ್ಗ ಮದುವೆ ಊಟ ಸುದ್ದಿ 2021

ಮದುವೆ ಸಮಾರಂಭದಲ್ಲಿ ಊಟ ಸೇವಿಸಿದ್ದ ಹಲವು ಜನರಲ್ಲಿ ವಾಂತಿ, ಬೇಧಿ, ಜ್ವರ, ಹೊಟ್ಟೆನೋವು ಕಾಣಿಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

people-admitted-to-hospital
ಅಸ್ವಸ್ಥರಾದ ಜನ ಆಸ್ಪತ್ರೆಗೆ ದಾಖಲು
author img

By

Published : Nov 18, 2021, 9:00 PM IST

ಶಿವಮೊಗ್ಗ: ಮದುವೆ ಸಮಾರಂಭದಲ್ಲಿ ಊಟ ಸೇವಿಸಿದ್ದ ಹಲವರಲ್ಲಿ ವಾಂತಿ, ಬೇಧಿ, ಜ್ವರ, ಹೊಟ್ಟೆನೋವು ಕಾಣಿಸಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ನಾಗತಿಬೆಳಗಲು ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಮದುವೆ ಸಮಾರಂಭ ನಡೆದಿದೆ. ಆದರೆ, ಮಧ್ಯಾಹ್ನ ಊಟ ಸೇವಿಸಿದ್ದ ಹಲವರು ರಾತ್ರಿ ವೇಳೆಗೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಹಲವರು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೂ ಕೆಲವರು ಭದ್ರಾವತಿ ಸಾರ್ವಜನಿಕ ಆಸ್ಪತ್ರೆ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರು ಖಾಸಗಿ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಜನರು ಅಸ್ವಸ್ಥರಾಗಲು ಕಾರಣವೇನು ಅನ್ನುವುದು ನಿಖರವಾಗಿ ತಿಳಿದು ಬಂದಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಊಟದ ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ: ಬೆಂಗಳೂರು ಗ್ರಾಮಾಂತರ ಶಾಲೆಗಳಿಗೆ 2 ದಿನ ರಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.