ETV Bharat / state

ಭದ್ರಾವತಿಯ ವಿಐಎಸ್ಎಲ್​​​ನಲ್ಲಿ ಶೀಘ್ರವೇ ಆಕ್ಸಿಜನ್ ಉತ್ಪಾದನೆ: ಸಚಿವ ಈಶ್ವರಪ್ಪ

ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಒಂದು ಆಕ್ಸಿಜನ್ ಪ್ಲಾಂಟ್ ಇದೆ. ಇದು ಹಳೆಯ ಪ್ಲಾಂಟ್ ಆಗಿದ್ದು, ಈ ಪ್ಲಾಂಟ್​ಗೆ ಸ್ವಲ್ಪ ಹಣ ಖರ್ಚು ಮಾಡಿದ್ರೆ ಇಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ. ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಈ ಕುರಿತು ಚರ್ಚೆ ನಡೆಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

oxygen will produced in visl oxygen plant

author img

By

Published : May 4, 2021, 4:25 PM IST

ಶಿವಮೊಗ್ಗ: ಭದ್ರಾವತಿಯ ವಿಐಎಸ್ಎಲ್​ನಲ್ಲಿ ಆಕ್ಸಿಜನ್ ಪ್ಲಾಂಟ್ ಇದೆ. ಇಲ್ಲಿ ಶೀಘ್ರವಾಗಿ ಆಕ್ಸಿಜನ್ ತಯಾರು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಇಂದು ಚೇಂಬರ್ ಆಫ್ ಕಾಮರ್ಸ್​ನಲ್ಲಿ ನಡೆದ ಸೇವಾ ಭಾರತಿ ಹೆಲ್ಪ್ ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಮತ್ತು ಜಿಲ್ಲಾಧಿಕಾರಿ ಭದ್ರಾವತಿಗೆ ಭೇಟಿ ನೀಡಿದ್ದೆವು. ಇಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಒಂದು ಆಕ್ಸಿಜನ್ ಪ್ಲಾಂಟ್ ಇದೆ. ಇದು ಹಳೆಯ ಪ್ಲಾಂಟ್ ಆಗಿದ್ದು, ಈ ಪ್ಲಾಂಟ್​ಗೆ ಸ್ವಲ್ಪ ಹಣ ಖರ್ಚು ಮಾಡಿದ್ರೆ ಇಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ. ಇಲ್ಲಿ ಇನ್ನು ಮೂರು ನಾಲ್ಕು ದಿನದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತದೆ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ

ನಮ್ಮ ಜಿಲ್ಲೆಗೆ ಬೇಕಾದ ಆಕ್ಸಿಜನ್ ಇಲ್ಲಿಂದಲೇ ಉತ್ಪಾದನೆ ಮಾಡಬಹುದಾಗಿದೆ. ವಾರದ ಒಂದು ದಿನದ ಆಕ್ಸಿಜನ್ ನಮ್ಮ ಜಿಲ್ಲೆಗೆ ಸಾಕಾಗುತ್ತದೆ. ಉಳಿದ ದಿನದ ಆಕ್ಸಿಜನ್ ಬೇರೆಯವರಿಗೆ ನೀಡಬಹುದಾಗಿದೆ. ಇಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಈ ಕುರಿತು ಚರ್ಚೆ ನಡೆಸುತ್ತೇನೆ. ವಿಐಎಸ್ಎಲ್​ನಲ್ಲಿ ಅದಷ್ಟು ಬೇಗ ಆಕ್ಸಿಜನ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗುವುದು ಎಂದರು.

ಸರ್ಕಾರದ ಜೊತೆ ಸಂಘ- ಸಂಸ್ಥೆಗಳು ಕೈ ಜೋಡಿಸಬೇಕು:

ರಾಜ್ಯದಲ್ಲಿ ನಿರೀಕ್ಷೆಗೆ ಮೀರಿ ಕೋವಿಡ್ ಹರಡುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜೊತೆ ಕೈ ಜೋಡಿಸಲೇಬೇಕು. ಸರ್ಕಾರ ಒಂದೇ ಈ ಕೆಲಸ ಮಾಡಲು ಸಾಧ್ಯವಿಲ್ಲ. ಸರ್ಕಾರ, ಸೇವಾ ಸಂಸ್ಥೆಗಳು ಒಟ್ಟಿಗೆ ಸೇರಿದಾಗ ಈ ಕೋವಿಡ್ ಖಂಡಿತಾ ದೂರ ಹೋಗಲಿದೆ ಎಂದರು.

ಈ ಹಿಂದಿನಿಂದಲೂ ಸಂಘ ಸಂಸ್ಥೆಗಳು ಸಹಕಾರ ಕೊಡುತ್ತಾ ಬಂದಿವೆ. ಎಲ್ಲಾ ಕಾರ್ಯಗಳನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ ಸೇವಾ ಭಾರತಿಯವರು ಮುಂದೆ ಬಂದಿದ್ದಾರೆ. ಸೇವಾ ಭಾರತಿ ಕಾರ್ಯ ಬೇರೆ ಬೇರೆ ಸಂಘಟನೆಗಳಿಗೆ ಮಾದರಿ ಕಾರ್ಯ ಆಗಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.