ETV Bharat / state

ನಗರದಲ್ಲಿ ರೌಡಿಗಳ ಪರೇಡ್​​... ವರ್ತನೆ ತಿದ್ದಿಕೊಳ್ಳದಿದ್ದರೆ ಹುಷಾರ್​​​​... ಎಸ್​​​ಪಿ ಖಡಕ್​ ವಾರ್ನಿಂಗ್​​​! - ಪರೇಡ್

ನಗರದ ಡಿಎಆರ್​ ಮೈದಾನದಲ್ಲಿ ಪೊಲೀಸ್ ಇಲಾಖೆ ರೌಡಿಗಳ ಪರೇಡ್ ನಡೆಸಿತು. ಈ ವೇಳೆ ರೌಡಿಗಳು ಬಾಲ ಬಿಚ್ಚದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಎಚ್ಚರಿಕೆ ನೀಡಿದರು.

ರಂಜಾನ್ ಹಬ್ಬದ ಪ್ರಯುಕ್ತ ರೌಡಿಗಳ ಪರೇಡ್‌
author img

By

Published : May 13, 2019, 2:12 PM IST

ಶಿವಮೊಗ್ಗ: ರಂಜಾನ್ ಹಬ್ಬದ ನಿಮಿತ್ತ ನಗರದ ಡಿಎಆರ್​ ಮೈದಾನದಲ್ಲಿ ಪೊಲೀಸ್ ಇಲಾಖೆ ಇಂದು ರೌಡಿಗಳ ಪರೇಡ್ ನಡೆಸಿತು. ರಂಜಾನ್ ಹಬ್ಬ ಇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಅವರು ಉಪ ವಿಭಾಗದ ರೌಡಿಗಳನ್ನು ಕರೆಯಿಸಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದರು.

ರಂಜಾನ್ ಹಬ್ಬದ ಪ್ರಯುಕ್ತ ರೌಡಿಗಳ ಪರೇಡ್​ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ

ಸುಮಾರು 1002 ರೌಡಿ‌ ಶೀಟರ್​ಗಳಿದ್ದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಕೇವಲ 300 ರೌಡಿಗಳು ಮಾತ್ರ ಪರೇಡ್​ನಲ್ಲಿ ಹಾಜರಾಗಿದ್ದರು. ಹಿಂದಿನಂತೆ ನಾನು‌ ರೌಡಿ, ನನ್ನ ಮಾತು ನಡೆಯಬೇಕು. ಎದುರಾಳಿ ಗ್ಯಾಂಗ್​ ಹೊಡೆಯಬೇಕು ಎಂಬ ಯೋಚನೆಗಳಿದ್ದರೆ ಬಿಡಬೇಕು. ಇದೇ ರೀತಿ ವರ್ತಿಸಿದರೆ ಪರಿಣಾಮ ನೆಟ್ಟಗಿರಲ್ಲ ಅಂತ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದರು. ಮುಖ್ಯವಾಗಿ ಗಾಂಜಾ ಪ್ರಕರಣದಲ್ಲಿದ್ದವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.

Intro:ರಂಜಾನ್ ಹಬ್ಬದ ಪ್ರಯುಕ್ತ ಶಿವಮೊಗ್ಗ ಉಪ ವಿಭಾಗದ ರೌಡಿಗಳ ಪೆರೇಡ್ ನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ರವರು ನಡೆಸಿದರು. ಡಿಎಆರ್ ಮೈದಾನದಲ್ಲಿ ಉಪ ವಿಭಾಗದ ರೌಡಿಗಳನ್ನು ಕರೆಯಿಸಿ ಅವರಿಗೆ ಎಚ್ಚರಿಕೆ ನೀಡಲಾಯಿತು. ಉಪ ವಿಭಾಗದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 1002 ರೌಡಿ‌ ಶೀಟರ್ ಗಳಿದ್ದಾರೆ. ಇದರಲ್ಲಿ ಇಂದು ಕೇವಲ 300 ರೌಡಿಗಳು ರೌಡಿ ಪೆರೇಡ್ ನಲ್ಲಿ ಹಾಜರಾಗಿದ್ದರು.

Body:ರೌಡಿ ಪೆರೇಡ್ ನಲ್ಲಿ‌ ಎಸ್ಪಿ ಡಾ.ಅಶ್ವಿನಿರವರು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಹಿಂದಿನಂತೆ ನಾನು‌ ರೌಡಿ, ನನ್ನ ಮಾತು ನಡೆಯಬೇಕು. ಎದುರಾಳಿ ಗ್ಯಾಂಗ್ ನ್ನು ಹೊಡೆಯಬೇಕು ಎಂಬ ಯೋಚನೆಗಳಿದ್ದರೆ ಬಿಡಬೇಕು ಎಂದು ವಾರ್ನಿಂಗ್ ನೀಡಿದರು. ಪ್ರತಿಯೊಬ್ಬ ರೌಡಿಯ ಹಿನ್ನಲೆ ಹಾಗೂ ಆತನ ಕೃತ್ಯಗಳನ್ನು ಕೇಳುತ್ತಾ ಮುಂದೆ ಇದೇ ರೀತಿ ವರ್ತಿಸಿದರೆ ಪರಿಣಾಮ ನೆಟ್ಟಗಿರಲ್ಲ ಅಂತ ಎಚ್ಚರಿಕೆ ನೀಡಿದರು. ಎಸ್ಪಿ ರವರು ಮುಖ್ಯವಾಗಿ ಗಾಂಜಾ ಕೇಸ್ ನಲ್ಲಿ ಇದ್ದವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ರೌಡಿಗಳಿಗೆ ಗಾಂಜಾ ಸಪ್ಲೆ ಮಾಡುವವರನ್ನು ಮಟ್ಟ ಹಾಕಬೇಕಿದೆ ಎಂದರು.

Conclusion:ರೌಡಿಗಳಿಗೆ ಇದೇ ರೀತಿ ಇದ್ದರೆ ನಿಮ್ಮ ಕೇಸುಗಳು ಖುಲಾಸೆಯಾಗುತ್ತವೆ. ಇಲ್ಲವಾದ್ರೆ, ಕೇಸ್ ಮೇಲೆ ಕೇಸ್ ಬಿಳುತ್ತಿರುತ್ತವೆ ಎಂದರು. ರೌಡಿ ಶೀಟರ್ ಗಳ ಪೋಟೊ, ಪೋನ್ ನಂಬರ್ ಹಾಗೂ ಸದ್ಯ‌ ಅವರುಗಳು ಏನೂ ಮಾಡುತ್ತಿದ್ದಾರೆ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ರೌಡಿ ಪೆರೇಡ್ ನಡೆಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ರೌಡಿಗಳಿಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ ಎಂದರು. ರೌಡಿ ಪೆರೇಡ್ ಗೆ ಹಂದಿ ಅಣ್ಣಿ ಬಿಟ್ಟರೆ ಬೇರೆ ಯಾವುದೇ ಕುಖ್ಯಾತ ರೌಡಿಗಳು ಹಾಜರಾಗಿರಲಿಲ್ಲ. ನಂತ್ರ ಕ್ರೈಂ ಪೊಲೀಸರ ಸಭೆ ನಡೆಸಿ, ಜಿಲ್ಲೆಯಲ್ಲಿ ರೌಡಿಗಳ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಶೇಖರ್, ಡಿವೈಎಸ್ಪಿಗಳು, ಸಿಪಿಐಗಳು ಹಾಗೂ ಪಿಎಸ್ಐಗಳು ಹಾಜರಿದ್ದರು.

ಬೈಟ್: ಡಾ.ಅಶ್ವಿನಿ.‌ಎಸ್ಪಿ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.